ಪೇಮೆಂಟ್‌ಗಾಗಿ ನಿತ್ಯ ಗುತ್ತಿಗೆದಾರರ ಅಲೆದಾಟ: ಕೆಲವೇ ಗಂಟೆಗಳಲ್ಲಿ ಸಿಕ್ತು 8 ತಿಂಗಳ ಬಾಕಿಗೆ ಪರಿಹಾರ !
ಆ ಸಂಸ್ಥೆ ನಮ್ಮ ಹಣ ಕೊಡ್ತಿಲ್ಲ ಅಂತ ಗುತ್ತಿಗೆದಾರರು ಪ್ರತಿಭಟನೆ ಮಾಡಿದ್ರು.ಆ ಸಂಸ್ಥೆಯ ಎಂಡಿ ಯಾರ ಕೈಗೂ ಸಿಗದೆ ಯಾಮಾರಿಸುತ್ತಿದ್ರು.ಆದ್ರೆ ಏಷ್ಯಾನೆಟ್ ಸುವರ್ಣನ್ಯೂಸ್ ಕ್ಯಾಮರಾ ಕಣ್ಣಿಗೆ ಬಿದ್ದ ಕೂಡಲೇ ಆಫೀಸ್‌ಗೆ ಧಾವಿಸಿ ಬಂದ್ರು.
ಒಂದ್ಕಡೆ ಹಣ ಪಾವತಿಸಿಲ್ಲ ಅಂದ್ರೆ ವಿಷ ಕುಡಿಯುತ್ತೀವಿ ಅಂತಿರೋ ಪ್ರತಿಭಟನಾಕಾರರು.ಮತ್ತೊಂದ್ಕಡೆ ಅವರೆಲ್ಲರನ್ನೂ ಸಮಾಧಾನಪಡಿಸುತ್ತಿರುವ ಸಂಸ್ಥೆಯ ಎಂ.ಡಿ.ಈ ಎಲ್ಲಾ ಹೈಡ್ರಾಮಾ ಕಂಡು ಬಂದಿದ್ದು, ಬೆಂಗಳೂರಿನ ಶಾಂತಿನಗರದ ಕಿಯೋನಿಕ್ಸ್(Keonics) ಸಂಸ್ಥೆಯಲ್ಲಿ. ಈ ಕಿಯೋನಿಕ್ಸ್ ಸಂಸ್ಥೆ ಗುತ್ತಿಗೆದಾರರ(Contractors) ಸುಮಾರು 300 ಕೋಟಿಯಷ್ಟು ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಸಚಿವರು ಹೇಳಿದ್ರೂ ಸಂಸ್ಥೆಯ ಅಧಿಕಾರಿಗಳು ಬಾಕಿ ಪಾವತಿ ಮಾಡ್ತಿಲ್ಲ, ಪರ್ಸಂಟೇಜ್ ಕೇಳ್ತಿದ್ದಾರೆ ಅಂತ ಒಂದಿಷ್ಟು ಗುತ್ತಿಗೆದಾರರು ಆರೋಪಿಸಿದ್ರು. ಸಂಸ್ಥೆಯ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು.. ಆದ್ರೆ ಇವರ ಪ್ರತಿಭಟನೆಗೆ ಕ್ಯಾರೇ ಅನ್ನದ ಎಂ.ಡಿ ಆಫೀಸ್ ಕಡೆ ತಲೆಯೂ ಹಾಕದೆ ಆರಾಮಾಗಿದ್ರು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ತಂಡ ಧಾವಿಸಿತ್ತು. ನಮ್ಮ ತಂಡ ಎಂಟ್ರಿ ಕೊಟ್ಟು ಸುದ್ದಿ ಮಾಡುತ್ತಿದ್ದಂತೆಯೇ ವಿಷಯ ತಿಳಿದ ಎಂ.ಡಿ ಕೂಡಲೆ ಕಿಯೋನಿಕ್ಸ್ ಗೆ ಧಾವಿಸಿದ್ರು. ನನ್ನದೇನೂ ತಪ್ಪಿಲ್ಲ, ಕೆಲವು ಕಡೆ ನಕಲಿ ಬಿಲ್ ಕೊಟ್ಟಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಬೇಕು ಆ ಬಳಿಕ ಬಿಲ್ ಪಾವತಿಯಾಗುತ್ತೆ ಅಂತಾ ಸಮಜಾಯಿಷಿ ಕೊಟ್ರು.ಯಾವಾಗ ಎಂ.ಡಿ ಸಂಗಪ್ಪ ಈ ರೀತಿಯಾಗಿ ಮಾತಾಡಿದ್ರೂ ಕ್ಯಾಬಿನ್ಗೆ ಬಂದ ಗುತ್ತಿಗೆದಾರರು ಎಂಡಿಯನ್ನು ತರಾಟೆಗೆ ತೆಗೆದುಕೊಂಡ್ರು. ನಾಲ್ಕೈದು ಜನರು ಮಾಡಿದ ತಪ್ಪಿಗೆ ಎಲ್ಲರನ್ನೂ ಶಿಕ್ಷೆಗೆ ಒಳಪಡಿಸೋದು ಸರಿಯಲ್ಲ ಅಂತ ಆಕ್ರೋಶ ಹೊರಹಾಕಿದ್ರು.ಯಾವಾಗ ಗಲಾಟೆ ಜೋರಾಯ್ತೋ ಎಂಡಿ ಸಂಗಪ್ಪ ಇನ್ನು 8 ದಿನಗಳಲ್ಲಿ ಗುತ್ತಿಗೆದಾರರ ಬಾಕಿ ಪಾವತಿಗೆ ಒಪ್ಪಿಕೊಂಡಿದ್ದಾರೆ. ಈ ಭರವಸೆಗೆ ಒಪ್ಪಿಗೆ ಸೂಚಿಸಿದ ಗುತ್ತಿಗೆದಾರರ ಅಸೋಸಿಯೇಷನ್ ಧರಣಿ ಕೈ ಬಿಟ್ಟಿದೆ.
ಇದನ್ನೂ ವೀಕ್ಷಿಸಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬಿಗ್ ರಿಲೀಫ್: ನಡ್ಡಾ ಕೇಸ್‌ಗೆ ಧಾರವಾಡ ಕೋರ್ಟ್ ಮಧ್ಯಂತರ ತಡೆ