ಮುಸ್ಲಿಂ ಶಾಸಕರ ಸಂಖ್ಯೆಯಲ್ಲಿ ಕುಸಿತ: ಎದುರಾದ ಮತವಿಭಜನೆ ಆತಂಕ..
ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದಿಂದ ಮಹತ್ವದ ಸಭೆ ನಡೆದಿದ್ದು, ಮುಸ್ಲಿಂ ನಾಯಕರ ಸಭೆಯಲ್ಲಿ ಮತವಿಭಜನೆ ಕುರಿತು ಚರ್ಚೆ ಮಾಡಲಾಗಿದೆ.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮುಸ್ಲಿಂ ಶಾಸಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದ್ದು, ಇದು ಮುಸ್ಲಿಂ ನಾಯಕರಲ್ಲಿ ಮತ ವಿಭಜನೆಯ ಆತಂಕಕ್ಕೆ ಕಾರಣವಾಗಿದೆ. ಮತ್ತೊಮ್ಮೆ ರಾಜಕೀಯ ಪಾರುಪತ್ಯ ಹೇಗೆ ಎಂದು ಗಂಭೀರ ಚರ್ಚೆ ನಡೆದಿದ್ದು, 2023ಕ್ಕೆ ಹೆಚ್ಚು ಪ್ರಾತಿನಿಧ್ಯಕ್ಕಾಗಿ ಮುಸ್ಲಿಂ ಸಮುದಾಯದ ಬೇಡಿಕೆಯಿದೆ. ಬೆಂಗಳೂರಿನಲ್ಲಿ ನಡೆದ ಮುಸ್ಲಿಂ ನಾಯಕರ ಸಭೆಯಲ್ಲಿ ಮತವಿಭಜನೆ ಕುರಿತು ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಬೇರೆ ಪಕ್ಷಗಳಿಂದ ಮತ ವಿಭಜನೆ ಬಗ್ಗೆ ಚರ್ಚೆ ನಡೆದಿದ್ದು, ಗುಜರಾತ್‌ನಂತೆ ರಾಜ್ಯದಲ್ಲೂ ಮುಸ್ಲಿಮ್ ಮತ ವಿಭಜನೆ ಆತಂಕ ಎದುರಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಕಲಚೇತನ ಪ್ರಯಾಣಿಕರಿಗೆ ವಿಶೇಷ ಸೇವೆ