BIG 3: ಅನೈತಿಕ ಚಟುವಟಿಕೆಗಳ ತಾಣವಾದ 'ಶ್ರೀನಿವಾಸಪುರ ಹೈಟೆಕ್ ಬಸ್ ನಿಲ್ದಾಣ'

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಬಸ್ ನಿಲ್ದಾಣಗಳ ಕಥೆ ಕೇಳಿದ್ರೆ ಸಾಕು, ಇಲ್ಲಿನ ಜನರು ಸ್ಥಳೀಯ ರಾಜಕಾರಣಿಗಳ ಬಗ್ಗೆ ಉರಿದು ಬೀಳ್ತಾರೆ. 

First Published Dec 12, 2022, 5:16 PM IST | Last Updated Dec 12, 2022, 5:16 PM IST

ಶ್ರೀನಿವಾಸಪುರ ಪಟ್ಟಣದ ಹೃದಯ ಭಾಗದಲ್ಲಿ ಹಳೆಯ ಬಸ್ ನಿಲ್ದಾಣ ಇದ್ರೂ ಸಹ, ಪಟ್ಟಣದಿಂದ ಸುಮಾರು 2 ಕೀ.ಮಿ ದೂರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ. ಕಳೆದ 2017 ಜೂನ್ 10ರಂದು ಶಾಸಕ ರಮೇಶ್ ಕುಮಾರ್ ಅವರು ಉದ್ಘಾಟನೆ ಮಾಡಿ ಹೋಗಿದ್ದು ಬಿಟ್ಟರೇ ಇಂದಿಗೂ ಇದರ ಬಳಕೆ ಮಾತ್ರ ಆಗ್ತಿಲ್ಲ. ಸಧ್ಯ ಈ ಬಸ್ ನಿಲ್ದಾಣ ಇದೀಗ ಭೂತ ಬಂಗಲೆ ರೀತಿ ಆಗಿದ್ದು, ಬಳಕೆ ಆಗದೆ ಗೋಡೆಗಳು, ಮೇಲ್ಛಾವಣಿಗಳು ಬಿರುಕು ಬಿಟ್ಟಿವೆ. ಈ ಬಸ್ ನಿಲ್ದಾಣ ಎಣ್ಣೆ ಪಾರ್ಟಿ, ಜೊತೆಗೆ ಅನೈತಿಕ ಚಟುವಟಿಕೆ ತಾಣವಾಗಿದೆ.

6 ಪತ್ನಿ 54 ಮಕ್ಕಳ ತಂದೆ ಅಬ್ದುಲ್ಲಾಗೆ ಹೃದಯಾಘಾತ, ಗಂಡುಗಲಿಗೆ 150 ಕುಟುಂಬ ಸದಸ್ಯರ ಸಂತಾಪ!