Kolar: ಅಂತರಗಂಗೆಗೆ ಟ್ರೆಕ್ಕಿಂಗ್ ಹೋಗುತ್ತಿದ್ದೀರಾ..? ನಕಲಿ ಗೈಡ್‌ಗಳಿದ್ದಾರೆ ಎಚ್ಚರ!

ಈಗಷ್ಟೇ ಮಳೆಗಾಲ ಮುಗಿದಿದ್ದು, ಪ್ರಕೃತಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಟ್ರೆಕ್ಕಿಂಗ್ ಮಾಡುವುದಕ್ಕೆ ಇದು ಬೆಸ್ಟ್ ಸೀಸನ್. ಕೋಲಾರದ ಅಂತರ ಗಂಗೆ ಬೆಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

First Published Nov 24, 2021, 10:28 AM IST | Last Updated Nov 24, 2021, 10:51 AM IST

ಕೋಲಾರ (ನ. 24): ಈಗಷ್ಟೇ ಮಳೆಗಾಲ (Rainy Season) ಮುಗಿದಿದ್ದು, ಪ್ರಕೃತಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ.  ಟ್ರೆಕ್ಕಿಂಗ್  (Trekking) ಮಾಡುವುದಕ್ಕೆ ಇದು ಬೆಸ್ಟ್ ಸೀಸನ್. ಇಲ್ಲಿನ ಅಂತರ ಗಂಗೆ (Antaragange) ಬೆಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ (Tourists)  ಟ್ರೆಕ್ಕಿಂಗ್ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಟ್ರೆಕ್ಕಿಂಗ್ ಮಾಡುವವರಿಗೆ ಅನುಕೂಲವಾಗಲೆಂದು ಪ್ರವಾಸೋದ್ಯಮ ಇಲಾಖೆ ಸ್ಥಳೀಯರನ್ನು ಗೈಡ್‌ಗಳನ್ನಾಗಿ ನೇಮಿಸಿದೆ. ಆದರೆ ಇವರು ಪ್ರವಾಸಿಗರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. 

Costly Fish: ಬಲೆಗೆ ಬಿತ್ತು ದುಬಾರಿ ಮೀನು, ಬೆಲೆ ಲಕ್ಷಕ್ಕೂ ಹೆಚ್ಚು, ಟೇಸ್ಟ್ ಸೂಪರ್