Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ದೀಪಾವಳಿ ಖರೀದಿಯ ಭರಾಟೆ: ಮಾರ್ಕೆಟ್‌ನಲ್ಲಿ ಮಾಸ್ಕ್‌ ಧರಿಸದೆ ಜನರ ಓಡಾಟ..!

ಜನರಿಂದ ತುಂಬಿ ತುಳುಕುತ್ತಿರುವ ಮಾರ್ಕೆಟ್‌ಗಳು| ವ್ಯಾಪಾರಿಗಳ ಅಕ್ಕಪಕ್ಕವೇ ಕುಳಿತು ವಹಿವಾಟು| ಕೊರೋನಾ ಭಯ ಮರೆತ ಜನರು| ಬಿಂದಾಸ್‌ ಆಗಿ ಶಾಪಿಂಗ್‌ ಮಾಡುತ್ತಿರುವ ಜನರು| 

ಹುಬ್ಬಳ್ಳಿ(ನ.15):  ನಗರದಲ್ಲಿ ದೀಪಾವಳಿ ಹಬ್ಬದ ಖರೀದಿಯ ಭರಾಟೆ ಜೋರಾಗಿದೆ. ಹೌದು, ಜನರಿಂದ ಮಾರ್ಕೆಟ್‌ಗಳು ತುಂಬಿ ತುಳುಕುತ್ತಿವೆ. ಇಲ್ಲೂ ಜನರು ಮಾತ್ರ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರಕ್ಕೆ ಗುಡ್‌ಬೈ ಹೇಳಿದಂತಿದೆ. ಯಾರೋಬ್ಬರು ಕೂಡ ಸಾಮಾಜಿಕ ಅಂತರವನ್ನ ಪಾಲನೆ ಮಾಡುತ್ತಿಲ್ಲ. 

ಮಹಾಮಾರಿ ಕೊರೋನಾ ಮರೆತು ಶಾಪಿಂಗ್‌ನಲ್ಲಿ ಗ್ರಾಹಕರು ಬ್ಯುಸಿ...!

ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳ ಅಕ್ಕಪಕ್ಕವೇ ಕುಳಿತು ವಹಿವಾಟು ನಡೆಸುತ್ತಿದ್ದಾರೆ. ಮಹಾಮಾರಿ ಕೊರೋನಾ ಭಯಾನೇ ಇಲ್ಲವೆಂಬಂತೆ ಬಿಂದಾಸ್‌ ಆಗಿ ಜನರು ಶಾಪಿಂಗ್‌ನಲ್ಲಿ ತಲ್ಲೀನರಾಗಿದ್ದಾರೆ. ಹಬ್ಬದ ಸಮಯದಲ್ಲಿ ಕೋವಿಡ್‌ ನಿಯಮವನ್ನ ಯಾರೂ ಪಾಲನೆ ಮಾಡುತ್ತಿಲ್ಲ. 
 

Video Top Stories