ಬೆಂಗಳೂರಿನ ಸಹಕಾರ ಸಂಘದ ಕಚೇರಿಯಲ್ಲಿ ಭ್ರಷ್ಟಾಚಾರ: ಇಲ್ಲಿ ಬ್ರೋಕರ್‌ಗಳದ್ದೇ ದರ್ಬಾರ್

ಬೆಂಗಳೂರಿನಲ್ಲಿ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದ್ದು, ಈ ಕಚೇರಿಯಲ್ಲಿ ಲಂಚ ಕೊಡದಿದ್ರೆ ಯಾವ ಕೆಲಸವೂ ಆಗಲ್ಲ.
 

First Published Nov 13, 2022, 12:14 PM IST | Last Updated Nov 13, 2022, 12:14 PM IST

ಸಹಕಾರ ಸಂಘ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಯಾವುದೇ ನೋಂದಣಿಗಾದ್ರೂ ಇಲ್ಲಿ ಲಂಚ ಕೊಡಲೇಬೇಕು. ಈ ಕಚೇರಿಯಲ್ಲಿ ಬ್ರೋಕರ್‌ಗಳದ್ದೇ ದರ್ಬಾರ್‌ ಇದೆ‌. ರಹಸ್ಯ ಕಾರ್ಯಾಚರಣೆಯಲ್ಲಿ ಬ್ರೋಕರ್‌ಗಳ ಮುಖವಾಡ ಬಯಲಾಗಿದ್ದು, ಬೆಂಗಳೂರಿನ ಮಲ್ಲೇಶ್ವರಂ ವಲಯ 4ರ ಸಹಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಶರಣು, ಮುನ್ನಾ ಎಂಬ ಬ್ರೋಕರ್‌ಗಳಿಂದ  ಹಗಲು ದರೋಡೆ ನಡೆದಿದ್ದು, ಸರ್ಕಾರಿ ಕೆಲಸವನ್ನು ಇಲ್ಲಿ ಬ್ರೊಕರ್'ಗಳೇ ಮಾಡುತ್ತಾರೆ. ಅಧಿಕಾರಿಗಳ ಸೀಲ್‌ ಹಾಕಿ ನೋಂದಣಿ ಮಾಡಿಕೊಡುತ್ತಾರೆ. ಸರ್ಕಾರಿ ಶುಲ್ಕ 1000 ಇದ್ರೆ   ಬ್ರೋಕರ್ಸ್‌ ತಗೊಳ್ಳುವುದು 9 ಸಾವಿರ. ನೋಂದಣಿಗೆ ತೆರಳಿದ್ದ ಅಭಿಷೇಕ್‌'ಗೆ 9 ಸಾವಿರ ಲಂಚಕ್ಕೆ ಡಿಮ್ಯಾಂಡ್‌ ಮಾಡಲಾಗಿದ್ದು, ವಿಡಿಯೋ ರೆಕಾರ್ಡ್‌ ಮಾಡಿಕೊಂಡು  ಅವರು ದೂರ ನೀಡಿದ್ದಾರೆ.

ಲೋಕ ಅದಾಲತ್‌ನಲ್ಲಿ 34 ಸಾವಿರ ಪ್ರಕರಣಗಳ ಇತ್ಯರ್ಥ