‘ಕೈ’ತಪ್ಪುತ್ತಿರುವ ಮತಗಳು: ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಭೆ

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶಗಳ ಚುನಾವಣಾ ಫಲಿತಾಂಶದ‌ ಬೆನ್ನಲ್ಲೇ ಕಾಂಗ್ರೆಸ್ ಎಚ್ಚೆತ್ತುಕೊಂಡಿದ್ದು,‌ ಮುಸ್ಲಿಂ ಮತಗಳ ವಿಭಜನೆ ತಡೆಯಲು ಮುಂದಾಗಿದೆ.
 

First Published Dec 13, 2022, 5:50 PM IST | Last Updated Dec 13, 2022, 5:50 PM IST

ಎಎಪಿ, AIMIM ಕಡೆ ಮುಸ್ಲಿಂ ಮತಗಳು ಡಿವೈಡ್‌ ಆಗುತ್ತಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರ ಮಹತ್ವದ ಸಭೆ ಕರೆಯಲಾಗಿದೆ.‌ ಮುಸ್ಲಿಂ ಸಮುದಾಯಕ್ಕೆ ಸಂದೇಶ ನೀಡಲು ಕೈ ಪಡೆ ಮುಂದಾಗಿದ್ದು, ರೆಹಮಾನ್‌ ಖಾನ್‌, ಸಲೀಂ ಅಹಮದ್‌, ಜಮೀರ್‌ ಭಾಗಿಯಾಗಿದ್ದಾರೆ. ಕಾಂಗ್ರೆಸ್’ನ ಬಹುತೇಕ ಮುಸ್ಲಿಂ ನಾಯಕರು ಸಭೆಗೆ ಹಾಜರಾಗಿದ್ದು,‌ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಲು ಹೈಕಮಾಂಡ್‌ಗೆ ಮನವಿ ಮಾಡಲಾಗಿದೆ. 60 ಕ್ಷೇತ್ರಗಳಲ್ಲಿ ಅಲ್ಪ ಸಂಖ್ಯಾತ ಮತ ಕ್ರೋಡಿಕರಣಕ್ಕೆ ರಣತಂತ್ರ ರೂಪಿಸಲಾಗುತ್ತಿದೆ.