Asianet Suvarna News Asianet Suvarna News

ಚಿಕ್ಕಮಗಳೂರು; ವಾಹನದ ಮೇಲೆ ದಾಳಿ ಮಾಡಿದ ಆನೆ, ಜಸ್ಟ್ ಎಸ್ಕೇಪ್!

Dec 7, 2020, 6:07 PM IST

ಚಿಕ್ಕಮಗಳೂರು(ಡಿ.  07)  ಪಿಕ್‌ಅಪ್ ವಾಹನದ ಮೇಲೆ ಒಂಟಿ‌ ಸಲಗ ದಾಳಿ  ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಚಾರ್ಮಾಡಿ ಘಾಟಿಯ ಜೇನುಕಲ್ ಬಳಿ ಆನೆ ದಾಳಿ ಮಾಡಿದೆ. 

ಅಮ್ಮನಿಂದ ತಪ್ಪಿಸಿಕೊಂಡ ಮರಿಯಾನೆ ಮರಳಿ ಕಾಡಿಗೆ

ಕಕ್ಕಿಂಜೆಯಿಂದ ಕೊಟ್ಟಿಗೆಹಾರಕ್ಕೆ ಬರುತ್ತಿದ್ದ ಪಿಕ್‌ಅಪ್ ವಾಹನವನ್ನು ಅಟ್ಟಿಸಿಕೊಂಡು ಬಂದಿದೆ.  ಒಂಟಿ ಸಲಗ ಕಂಡು ಗಾಬರಿಯಿಂದ ವಾಹನ ಬಿಟ್ಟು ಸವಾರರು ಪರಾರಿಯಾಗಿದ್ದಾರೆ. ವಾಹನದಲ್ಲಿ ಇದ್ದ ಸತೀಶ್, ಅಶ್ವಿನ್, ವಿನಯ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.ಸಲಗವನ್ನು ಕಾಡಿಗೆ ಕಳಿಸಿ ಎಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.