ಮಚ್ಚು ಹಿಡಿದು ಭರ್ಜರಿ ಸ್ಟೆಪ್ಸ್ ! ಇಂಟರ್ನೆಟ್‌ನಲ್ಲೂ ಹವಾ ಎಬ್ಬಿಸಿದ ಡಾಕ್ಟರ್ ಡ್ಯಾನ್ಸ್!

ಸಂಜೀವ್ ಶ್ರೀವಾಸ್ತವ ಗೊತ್ತಾ? ಬಿಡಿ ತಲೆ ಕೆರೆದುಕೊಳ್ಳಬೇಡಿ, ಡ್ಯಾನ್ಸಿಂಗ್ ಅಂಕಲ್ ನೆನಪಿದ್ದಾರಲ್ವಾ?  ಕಳೆದ ವರ್ಷ ಡ್ಯಾನ್ಸಿಂಗ್ ಅಂಕಲ್ ತಮ್ಮ ಭರ್ಜರಿ ಸ್ಟೆಪ್‌ಗಳಿಂದ ಭಾರೀ ವೈರಲ್ ಆಗಿದ್ದರು. ಈಗ ಚಿಕ್ಕಮಗಳೂರಿನ ಡಾಕ್ಟರ್‌ವೊಬ್ಬರು ಹಾಡಿಗೆ ಹೆಜ್ಜೆ ಹಾಕುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

First Published Nov 27, 2019, 4:05 PM IST | Last Updated Nov 27, 2019, 4:06 PM IST

ಚಿಕ್ಕಮಗಳೂರು (ನ.27): ಸಂಜೀವ್ ಶ್ರೀವಾಸ್ತವ ಗೊತ್ತಾ? ಬಿಡಿ ತಲೆ ಕೆರೆದುಕೊಳ್ಳಬೇಡಿ, ಡ್ಯಾನ್ಸಿಂಗ್ ಅಂಕಲ್ ನೆನಪಿದ್ದಾರಲ್ವಾ?  ಕಳೆದ ವರ್ಷ ಡ್ಯಾನ್ಸಿಂಗ್ ಅಂಕಲ್ ತಮ್ಮ ಭರ್ಜರಿ ಸ್ಟೆಪ್‌ಗಳಿಂದ ಭಾರೀ ವೈರಲ್ ಆಗಿದ್ದರು. ಈಗ ಚಿಕ್ಕಮಗಳೂರಿನ ಡಾಕ್ಟರ್‌ವೊಬ್ಬರು ಹಾಡಿಗೆ ಹೆಜ್ಜೆ ಹಾಕುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶೃಂಗೇರಿಯ ರೋಟರಿ ಕ್ಲಬ್ ಆಯೋಜಿಸಿದ್ದ ಕಲಾವೈಭವ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಡಾಕ್ಟರ್‌ವೊಬ್ಬರು ಮಚ್ಚು ಹಿಡಿದು ಸಖತ್ ಹೆಜ್ಜೆ ಹಾಕಿದ್ದಾರೆ. ಡಾಕ್ಟರ್‌ ಡ್ಯಾನ್ಸ್‌ಗೆ ಸಭಿಕರು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಈಗ ಇಂಟರ್ನೆಟ್‌ನಲ್ಲೂ ಡಾಕ್ಟರ್ ಡ್ಯಾನ್ಸ್ ಹವಾ ಎಬ್ಬಿಸಿದೆ.