ಲಸಿಕೆ ಪಡೆದುಕೊಂಡರೂ ವಾಣಿವಿಲಾಸದ ಐವರಿಗೆ ಕೊರೋನಾ!

ಲಸಿಕೆ ಹಾಕಿಸಿಕೊಂಡಾಗಿದೆ ಎಂದು ಮೈಮರೆಯುವ ಹಾಗಿಲ್ಲ/ ಮಾಸ್ಕ್ ಧರಿಸುವುದನ್ನು ಮರೆಯಬೇಡಿ/ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರೂ ಅಟಕಾಯಿಸಿಕೊಂಡ ಕೊರೋನಾ/ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲು ಎಷ್ಟು ದಿನ ಕಾಯಬೇಕು? 

First Published Mar 20, 2021, 7:13 PM IST | Last Updated Mar 20, 2021, 7:13 PM IST

ಬೆಂಗಳೂರು(ಮಾ. 20)  ಕೊರೋನಾ ಲಸಿಕೆ ಬಂದಿದೆ ಎಂದು ಮೈಮರೆಯುವ ಹಾಗಿಲ್ಲ. ಚುಚ್ಚುಮದ್ದು ಹಾಕಿಸಿಕೊಂಡಿದ್ದೇವೆ ಎಂದು ಮಾಸ್ಕ್ ಹಾಕುವುದನ್ನು ಮರೆಯಬೇಡಿ.. ವ್ಯಾಕ್ಸಿನ್ ಹಾಕಿಸಿಕೊಂಡರೂ ಕೊರೋನಾ ಬರುತ್ತದೆ.

ಚೀನಾ ವಾಕ್ಸಿನ್ ಪಡೆದಿದ್ದ ಪಾಕ್ ಪ್ರಧಾನಿ ಇಮ್ರಾನ್‌ಗೆ ಕೊರೋನಾ

ವ್ಯಾಕ್ಸಿನ್ ಪಡೆದಿದ್ದ ವಾಣಿವಿಲಾಸ ಆಸ್ಪತ್ರೆಯ ಐದು ಸಿಬ್ಬಂದಿಗೆ ಕೊರೋನಾ ಅಂಟಿಕೊಂಡಿದೆ. ನೆಗಡಿ ಕೆಮ್ಮಿನಿಂದ ಬಳಲುತ್ತಿದ್ದವರಿಗೆ ಮೊದಲು ಕೊರೋನಾ ತಾಗಿದೆ. ಲಸಿಕೆ ಪಡೆದು 45  ದಿನಗಳ ನಂತರ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ ಎಂಬುದನ್ನು ಗಮನದಲ್ಲಿ ಇಡಿ.