ವಿಧಾನಸೌಧದಲ್ಲಿ 10 ಲಕ್ಷ ಜಪ್ತಿ ಪ್ರಕರಣ: ಕಾಂಚಾಣದ ಮಾಹಿತಿ ಬಾಯ್ಬಿಡದ ಕಿರಿಯ ಎಂಜಿನಿಯರ್
ವಿಧಾನಸೌಧದಲ್ಲಿ 10 ಲಕ್ಷ ರೂ. ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಹಣ ಯಾರದ್ದು ಎಂಬ ಪ್ರಶ್ನೆ ಮೂಡಿದ್ದು, ಲಂಚದ ಹಣವೆಂಬ ಅನುಮಾನ ವ್ಯಕ್ತವಾಗಿದೆ
ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜೆ. ಜಗದೀಶ್ ಬ್ಯಾಗ್'ನಲ್ಲಿ 10 ಲಕ್ಷ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ 10 ಲಕ್ಷ ಕಾಂಚಾಣದ ರಹಸ್ಯ ಬಯಲಿಗೆಳೆಯಲು ಪೊಲೀಸರು ಹರಸಾಹಸ ಪಡುತ್ತಿದ್ದು, ಜಗದೀಶ್ ಅವರನ್ನು ತೀವ್ರ ವಿಚಾರಣೆ ಮಾಡಲಾಗಿದೆ. ತಡರಾತ್ರಿವರೆಗೂ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ವಿಚಾರಣೆ ಮಾಡಿದ್ದು, ಹಣದ ಬಗ್ಗೆ ಆರೋಪಿ ಬಾಯಿ ಬಿಟ್ಟಿಲ್ಲ. ಇನ್ನು ಹಣ ಜಪ್ತಿ ವೇಳೆ ಲಾಸ್ಟ್ ಕಾಲ್'ನ್ನು ಆರೋಪಿಯು ಡಿಲೀಟ್ ಮಾಡಿದ್ದಾನೆ.
ಸಿದ್ದರಾಮಯ್ಯ ತವರಲ್ಲಿ ಕೇಸರಿ ರಣಕಹಳೆ: ದಲಿತ ಮತಗಳನ್ನು ಸೆಳೆಯಲು ಬಿಜೆಪಿ ಪ್ಲಾನ್