ಕ್ರಿಕೆಟ್ ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ ರಾಹುಲ್ ತೆವಾಟಿಯಾ..!
ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ಮಯಾಂಕ್ ಅಗರ್‌ವಾಲ್ ಆಕರ್ಷಕ ಶತಕ ಹಾಗೂ ನಾಯಕ ಕೆ.ಎಲ್ ರಾಹುಲ್ ರಾಹುಲ್ ಉಪಯುಕ್ತ ಅರ್ಧಶತಕದ ನೆರವಿನಿಂದ ಬರೋಬ್ಬರಿ 223 ರನ್ ಕಲೆಹಾಕಿತ್ತು. ಈ ಗುರಿಯನ್ನು ರಾಜಸ್ಥಾನ ಅನಾಯಾಸವಾಗಿ ತಲುಪಿದೆ.
ಶಾರ್ಜಾ(ಸೆ.28): ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ರಾಜಸ್ಥಾನ ನಡುವಿನ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ರನ್ ಮಳೆ ಹರಿದಿದೆ. ಇದರ ಜತೆಗೆ ಟಿ20 ಕ್ರಿಕೆಟ್‌ನಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ.
ಹೌದು, ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ಮಯಾಂಕ್ ಅಗರ್‌ವಾಲ್ ಆಕರ್ಷಕ ಶತಕ ಹಾಗೂ ನಾಯಕ ಕೆ.ಎಲ್ ರಾಹುಲ್ ರಾಹುಲ್ ಉಪಯುಕ್ತ ಅರ್ಧಶತಕದ ನೆರವಿನಿಂದ ಬರೋಬ್ಬರಿ 223 ರನ್ ಕಲೆಹಾಕಿತ್ತು. ಈ ಗುರಿಯನ್ನು ರಾಜಸ್ಥಾನ ಅನಾಯಾಸವಾಗಿ ತಲುಪಿದೆ.
ರಾಜಸ್ಥಾನ ರಾಯಲ್ಸ್ Vs ಕಿಂಗ್ಸ್ ಇಲೆವನ್ ಪಂಜಾಬ್ ಪಂದ್ಯದಲ್ಲಿ ಟ್ರೆಂಡ್ ಆದ ಟಾಪ್ 10 ಟ್ರೋಲ್‌ಗಳಿವು..!
ಹೌದು, ಸ್ಟೀವ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಆಕರ್ಷಕ ಜತೆಯಾಟ ನಿಭಾಯಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೊನೆಯ ಎರಡು ಓವರ್ ಬಾಕಿ ಇದ್ದಾಗ ಆಲ್ರೌಂಡರ್ ರಾಹುಲ್ ತೆವಾಟಿಯ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಪಂದ್ಯ ರಾಜಸ್ಥಾನ ಪಾಲಾಗುವಂತೆ ಮಾಡಿದರು. ಈ ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.