Asianet Suvarna News Asianet Suvarna News

IPL 2020: ಡೆಲ್ಲಿಗೆ 'ಡೆವಿಲ್ಸ್' ಆದ ಆರೆಂಜ್ ಆರ್ಮಿ..!

ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಹೈದರಾಬಾದ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ಡೆಲ್ಲಿ ತಂಡದ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡುವಲ್ಲಿ ಆರೆಂಜ್ ಆರ್ಮಿ ಯಶಸ್ವಿಯಾಗಿದೆ.

ಅಬುಧಾಬಿ(ಸೆ.30): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 2 ಸೋಲು ಕಂಡು ಹೈರಾಣಾಗಿ ಹೋಗಿದ್ದ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಹೌದು, ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಹೈದರಾಬಾದ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿತ್ತು. ಆದರೆ ಡೆಲ್ಲಿ ತಂಡದ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡುವಲ್ಲಿ ಆರೆಂಜ್ ಆರ್ಮಿ ಯಶಸ್ವಿಯಾಗಿದೆ.

ಐಪಿಎಲ್ 2020: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೈದರಾಬಾದ್ ಸೋಲುಣಿಸಿದ್ದು ಹೇಗೆ..?

ಹೈದರಾಬಾದ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರುವ ಮೂಲಕ ಡೆಲ್ಲಿ ವಿರುದ್ಧ 15 ರನ್‌ಗಳ ಅರ್ಹ ಗೆಲುವನ್ನು ದಾಖಲಿಸಿತು. ಈ ಪಂದ್ಯ ಹೇಗಿತ್ತು ಎನ್ನುವುದರ ಹೈಲೈಟ್ಸ್‌ ಇಲ್ಲಿದೆ ನೋಡಿ.