News Hour: ಜೆಪಿಸಿ ಎದುರು ರೈತರ ದೂರಿನ ಮಳೆ!

ವಕ್ಪ್‌ ಜೆಪಿಸಿ ಸದಸ್ಯರು ರಾಜ್ಯದ ರೈತರ ಸಂಕಷ್ಟವನ್ನು ಆಲಿಸಿದ್ದಾರೆ. ಅದರೊಂದಿಗೆ ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆ ಕಳವಳಕಾರಿ ಎಂದು ಹೇಳಿದೆ.
 

First Published Nov 7, 2024, 11:44 PM IST | Last Updated Nov 7, 2024, 11:44 PM IST

ಬೆಂಗಳೂರು (ನ.7): ರಾಜ್ಯದಲ್ಲಿ ವಕ್ಫ್‌ ಬೋರ್ಡ್‌ ದಬ್ಬಾಳಿಕೆಯ ಬಗ್ಗೆ ವಕ್ಫ್‌ ಕಾಯ್ದೆಯ ಕುರಿತಾಗಿ ಚರ್ಚೆ  ನಡೆಸಲು ಸಂಸತ್ತಿನಿಂದ ನೇಮಕವಾಗಿರುವ ಜೆಪಿಸಿ ಚೇರ್ಮನ್‌ ಜಗದಾಂಬಿಕಾ ಪಾಲ್‌ ಗುರುವಾರ ಕರ್ನಾಟಕಕ್ಕೆ ಭೇಟಿ ನೀಡಿದ್ದರು.

ವಕ್ಫ್ ದಬ್ಬಾಳಿಕೆ ವಿರುದ್ಧ ಜಂಟಿ ಸಂಸದೀಯ ಸಮಿತಿ ಸಮಸ್ಯೆ ಆಲಿಸಿದೆ. ಹಾವೇರಿ, ವಿಜಯಪುರದಲ್ಲಿ ರೈತರ ಕಷ್ಟವನ್ನು ಜೆಪಿಸಿ ಕೇಳಿದೆ. ವಕ್ಫ್​ ಬೋರ್ಡ್​ ನೋಟಿಸ್ ಕಥೆ ಹೇಳಿ ನೂರಾರು ರೈತರು ಕಣ್ಣೀರಿಟ್ಟಿದ್ದಾರೆ.

News Hour: ರೈತರ ಭೂಮಿ, ಮಠ-ದೇವಸ್ಥಾನ ಆಯ್ತು, ಈಗ ಐತಿಹಾಸಿಕ ಸ್ಮಾರಕಗಳು ವಕ್ಫ್‌ದಂತೆ!

ಇನ್ನೊಂದೆಡೆ ನಾಲ್ಕು ದಿನದಿಂದ ನಡೆದಿದ್ದ ಯತ್ನಾಳ್ ಧರಣಿ ಅಂತ್ಯವಾಗಿದೆ. ಜೆಪಿಸಿ ಅಧ್ಯಕ್ಷರ ​ ಭರವಸೆ ಬೆನ್ನಲ್ಲೇ ರೈತರು ಹೋರಾಟ ಕೈಬಿಟ್ಟಿದ್ದಾರೆ. ಇದೊಂದು ನಾಟಕ ಕಂಪನಿ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ.