Asianet Suvarna News Asianet Suvarna News

ಹಾಲಿ ಚಾಂಪಿಯನ್‌ಗೆ ಟಕ್ಕರ್ ಕೊಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು; ಪಂದ್ಯ ಗೆದ್ದಿದ್ದು ಹೇಗೆ?

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಕರ್ಷಕ 201 ರನ್‌ಗಳನ್ನು ಗಳಿಸುವ ಮೂಲಕ ಮುಂಬೈಗೆ ಸವಾಲಿನ ಗುರಿ ನೀಡಿತು. ಆರ್‌ಸಿಬಿ ಪರ ಆರಂಭಿಕರಾದ ಫಿಂಚ್, ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ ಅರ್ಧಶತಕ ಸಿಡಿಸಿದರು.

ದುಬೈ(ಸೆ.29): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಕರ್ಷಕ 201 ರನ್‌ಗಳನ್ನು ಗಳಿಸುವ ಮೂಲಕ ಮುಂಬೈಗೆ ಸವಾಲಿನ ಗುರಿ ನೀಡಿತು. ಆರ್‌ಸಿಬಿ ಪರ ಆರಂಭಿಕರಾದ ಫಿಂಚ್, ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ ಅರ್ಧಶತಕ ಸಿಡಿಸಿದರು.

ಇನ್ನು ಸವಾಲಿನ ಮೊತ್ತ ಬೆನ್ನತ್ತಿದ ಮುಂಬೈ ಕೂಡಾ 201 ರನ್ ಗಳಿಸಿತು. ಬಳಿಕ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಗೆದ್ದು ಬೀಗಿತು. ಈ ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 
Video Top Stories