Asianet Suvarna News Asianet Suvarna News

ಟ್ರೋಫಿ ಗೆಲ್ಲೋದ್ರಲ್ಲಿ ಮುಂಬೈ ಟಾಪ್, ಟೋಪಿ ಗೆಲ್ಲೋದ್ರಲ್ಲಿ ಹೈದ್ರಾಬಾದ್ ನಂ.1

ಮುಂಬೈ ಇಂಡಿಯನ್ಸ್‌ ತಂಡ ಬರೋಬ್ಬರಿ 4 ಐಪಿಎಲ್ ಟ್ರೋಫಿ ಗೆಲ್ಲುವುದರ ಮೂಲಕ ಅತ್ಯಂತ ಯಶಸ್ವಿ ತಂಡವೆಂದು ಗುರುತಿಸಿಕೊಂಡಿದೆ. ಇನ್ನು ಕ್ಯಾಪ್‌ ಗೆಲ್ಲುವ ವಿಚಾರದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ.
 

ದುಬೈ(ಸೆ.16): ಫ್ರಾಂಚೈಸಿಗಳು ಐಪಿಎಲ್ ಕಪ್ ಗೆಲ್ಲುವತ್ತ ಚಿತ್ತ ನೆಟ್ಟಿದ್ದರೆ, ಆಟಗಾರರು ಮಾತ್ರ ಟೋಪಿ(ಕ್ಯಾಪ್‌)ಗಳ ಮೇಲೆ ಕಣ್ಣಿಟ್ಟಿರುತ್ತಾರೆ. ವೈಯುಕ್ತಿಕವಾಗಿ ಉತ್ತಮ ಪ್ರದರ್ಶನ ತೋರುವುದರ ಮೂಲಕ ತಂಡ ಗೆಲ್ಲಿಸುವುದರ ಜತೆಗೆ ಅರೆಂಜ್ ಹಾಗೂ ಪರ್ಪಲ್ ಕ್ಯಾಪ್ ಗೆಲ್ಲಲು ಆಟಗಾರರು ಶಕ್ತಿ ಮೀರಿ ಪ್ರಯತ್ನಿಸುತ್ತಿರುತ್ತಾರೆ.

ಹೌದು, ಮುಂಬೈ ಇಂಡಿಯನ್ಸ್‌ ತಂಡ ಬರೋಬ್ಬರಿ 4 ಐಪಿಎಲ್ ಟ್ರೋಫಿ ಗೆಲ್ಲುವುದರ ಮೂಲಕ ಅತ್ಯಂತ ಯಶಸ್ವಿ ತಂಡವೆಂದು ಗುರುತಿಸಿಕೊಂಡಿದೆ. ಇನ್ನು ಕ್ಯಾಪ್‌ ಗೆಲ್ಲುವ ವಿಚಾರದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ.

IPLನಲ್ಲಿ RCB ಪರ ಅಬ್ಬರಿಸಲು ದೇವದತ್ ಪಡಿಕ್ಕಲ್ ರೆಡಿ

ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಹೆಚ್ಚು ಗೆದ್ದವರು ಐಪಿಎಲ್ ಟ್ರೋಪಿ ಗೆದ್ದಿಲ್ಲ ಎನ್ನುವುದು ಎಷ್ಟು ಸತ್ಯವೋ, ಕ್ಯಾಪ್‌ ಗಳಿಸಲು ಜಿದ್ದಿಗೆ ಬಿದ್ದವರಂತೆ ಆಡುವುದು ಅಷ್ಟೇ ಸತ್ಯ. ಯಾವ ತಂಡಗಳು ಎಷ್ಟು ಟೋಪಿ ಗೆದ್ದಿವೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ