ಎಲಾನ್ ಮಸ್ಕ್ ಮೆಚ್ಚಿದ ಈ ಇಂಡಿಯನ್ ಯಾರು? ಯುಎಸ್‌ನಲ್ಲಿ ಸ್ಥಾಪನೆಯಾಗುತ್ತಾ ವಿವೇಕ ರಾಮರಾಜ್ಯ..?
ಅಮೆರಿಕಾದಲ್ಲಿ ಹಲ್ ಚಲ್ ಸೃಷ್ಟಿಸಿದೆ ಆ ಒಬ್ಬನ ಅಬ್ಬರ!
ಆತನಿಗೋಸ್ಕರವೇ ಕಾಯ್ತಾ ಇದ್ಯಾ ಅಧ್ಯಕ್ಷನ ಸಿಂಹಾಸನ?
ಜೋ ಬೈಡನ್ ವಿರುದ್ಧ ತೊಡೆತಟ್ಟಿದ ಈ ಹೀರೋ ಯಾರು?
ಬ್ರಿಟನ್ ಗದ್ದುಗೆ ಹಿಡಿದಾಯ್ತು.. ಈಗ ಹಿರಿಯಣ್ಣನ ಮೇಲೆ ಕಣ್ಣಿಟ್ಟಿದ್ದಾರೆ ಭಾರತ(India) ಮೂಲದವರು. ರಿಷಿ ಸುನಕ್ ಭಾರತ ಮೂಲದ ಬ್ರಿಟನ್ ಪ್ರಜೆ. ಇವತ್ತಿನ ಆರ್ಥಿಕ ಸಂಕಷ್ಟದಲ್ಲಿ ಮುಳಗ್ತಾ ಇರೋ ಬ್ರಿಟನ್‌ನ ಯಾರಾದ್ರೂ ಕಾಪಾಡೋರು ಅಂತ ಇದ್ರೆ, ಅದು ರಿಷಿ ಸುನಕ್ ಮಾತ್ರ. ಅವರ ನಿಲುವುಗಳು, ಆಲೋಚನೆಗಳು, ಮಾಡ್ತಾ ಇರೋ ಕೆಲಸಗಳು, ಈಗಾಗ್ಲೇ ಬ್ರಿಟನ್ ಜನತೆಲಿ ರಿಷಿ ಸುನಕ್ ಬಗ್ಗೆ ಇರೋ ಗೌರವ ಹೆಚ್ಚಿಸಿದೆ. ರಿಷಿ ಸುನಕ್ ಅವರ ಮೇಲೆ ಈಗ ಬ್ರಿಟನ್ ಜನರ ನಂಬಿಕೆ ಹೆಚ್ಚಾಗಿದೆ. ರಾಜಕೀಯ ವಿರೋಧಿಗಳೂ ಸಹ ಅವರನ್ನ ನೇರವಾಗಿ ಟೀಕಿಸೋದಕ್ಕೆ ಹಿಂಜರಿತಿದ್ದಾರೆ. ಇತ್ತೀಚಿಗೆ ತಾನೆ, ಅಮೆರಿಕಾದ ರಿಪಬ್ಲಿಕನ್ ಪಾರ್ಟಿ, ಅದೇ ಡೊನಾಲ್ಡ್ ಟ್ರಂಪ್ ಪಾರ್ಲಿ, ಅಧ್ಯಕ್ಷನ ಆಯ್ಕೆಗೆ ಒಂದು ಡಿಬೇಟ್ ಮಾಡಿತ್ತು. ಆ ಡಿಬೇಟ್‌ನಲ್ಲಿ ವಿವೇಕ್ ರಾಮಸ್ವಾಮಿ (Vivek Ramaswamy)ಆಡಿದ ಆರಂಭಿಕ ಮಾತುಗಳೆ, ಅಮೆರಿಕಾದ(America) ರಾಜಕೀಯದಲ್ಲಿ ಸುನಾಮಿ ಸೃಷ್ಟಿಸಿದ್ವು. ಅಮೆರಿಕಾದ ಜನ ಯಾರಿವನು? ಯಾರಿವನು ಅಂತ ತಲೆ ಕೆಡಿಸ್ಕೊಂಡ್ರು. ಅಮೆರಿಕಾ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ, ಇಂಡಿಯಾ ಮೂಲದ ವ್ಯಕ್ತಿಯೊಬ್ಬ, ನಾನೂ ಪ್ರೆಸಿಡೆಂಟ್ ಆಗ್ತೀನಿ ಅಂತ ಮುಂದೆ ಬಂದಿದ್ದ. ಆತನ ಮಾತು ಕೇಳಿ ಅಮೆರಿಕಾ ದಿಗ್ಭ್ರಾಂತಗೊಂಡಿದ್ದಂತೂ ಸುಳ್ಳಲ್ಲ.
ಇದನ್ನೂ ವೀಕ್ಷಿಸಿ: ಕಂಡವರ ಸಂಸಾರದಲ್ಲಿ ಮೂಗು ತೂರಿಸಿದ್ದೇ ತಪ್ಪಾ ? ಎರಡನೇ ಪ್ರಯತ್ನದಲ್ಲಿ ದಲಿತ ನಾಯಕನ ಕೊಲೆ..!