Asianet Suvarna News Asianet Suvarna News

16 ತಿಂಗಳಲ್ಲಿ ಏರ್ ಇಂಡಿಯಾ ಹಣೆಬರಹ ಬದಲು, ಇದು ಟಾಟಾ ಗ್ರೂಪ್ ಸಾಹಸ ಗಾಥೆ !

ಟಾಟಾ ಒಡೆತನದಲ್ಲಿ ಆರಂಭಗೊಂಡ ಏರ್ ಇಂಡಿಯಾವನ್ನು ಅಂದಿನ ಕಾಂಗ್ರೆಸ್ ಸರ್ಕಾರ ತೆಕ್ಕೆಗೆ ತೆಗೆದುಕೊಂಡಿತ್ತು. ಬಳಿಕ ಏರ್ ಇಂಡಿಯಾ ನಷ್ಟದಲ್ಲೇ ದಿನದೂಡಿತ್ತು. ಬರೋಬ್ಬರಿ 60 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದ್ದ ಏರ್ ಇಂಡಿಯಾ ಕಂಪನಿಯನ್ನು ಮತ್ತೆ ಟಾಟಾ ಗ್ರೂಪ್ ಖರೀದಿ ಮಾಡಿತ್ತು. ಇದೀಗ 16 ತಿಂಗಳಲ್ಲಿ ಏರ್ ಇಂಡಿಯಾ ಹಣೆ ಬರಹ ಬದಲಾಗಿದ್ದು ಹೇಗೆ?

First Published Feb 17, 2023, 6:36 PM IST | Last Updated Feb 17, 2023, 6:36 PM IST

ಬರೋಬ್ಬರಿ  60 ಸಾವಿರ ಕೋಟಿ ನಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಮತ್ತೆ ತನ್ನದಾಗಿಸಿಕೊಂಡಾಗ ಇದು ಬೇಕಿತ್ತಾ ಎಂದವರೇ ಹೆಚ್ಚು. ಆದರೆ 16 ತಿಂಗಳಲ್ಲಿ ಏರ್ ಇಂಡಿಯಾ ಹಣೆಬರಹ ಬದಲಾಗಿದೆ. ಏರ್ ಇಂಡಿಯಾ ಇದೀಗ 470 ವಿಮಾನ ಖರೀದಿಗೆ ದಾಖಲೆ ಒಪ್ಪಂದ ಮಾಡಿಕೊಂಡಿದೆ. ಇದರ ಒಟ್ಟು ಮೊತ್ತ 111 ಲಕ್ಷ ಕೋಟಿ ರೂಪಾಯಿ. ಟಾಟಾ ಒಪ್ಪದಿಂದ ಅಮೆರಿಕದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಇದು ಐತಿಹಾಸಿಕ ಖರೀದಿ ಒಪ್ಪಂದ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರದಾನಿ ರಿಷಿ ಸುನಕ್, ಫ್ರಾನ್ಸ್ ಪ್ರಧಾನಿ ಮ್ಯಾಕ್ರನ್ ಸೇರಿದಂತೆ ವಿಶ್ವದ ಗಣ್ಯರು ಟಾಟಾ ಗ್ರೂಪ್‌ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಭಾರತವನ್ನೇ ಹೆಮ್ಮೆ ಪಡುವಂತೆ ಮಾಡಿದ ಏರ್ ಇಂಡಿಯಾ ಸಾಹಸಗಾಥೆ ಇಲ್ಲಿದೆ
 

Video Top Stories