10 ರಾಜ್ಯ.. 10 ಎಲೆಕ್ಷನ್.. ಮೋದಿಗೆ ಸೆಮಿಫೈನಲ್: 2023ರಲ್ಲಿ ಗಜಕೇಸರಿ ಮುಂದೆ ಮೆಗಾ ಚಾಲೆಂಜ್!

10 ರಾಜ್ಯ... 10 ಚುನಾವಣೆ.. ಮೋದಿಗೆ ಸೆಮಿಫೈನಲ್..! 2023ರಲ್ಲಿ ಗಜಕೇಸರಿಗೆ ಮೆಗಾ ಚಾಲೆಂಜ್..! 2023ರ ಚಾಲೆಂಜ್ ಗೆದ್ದರೆ 2024ರಲ್ಲಿ ದೆಹಲಿ ಪಟ್ಟ..! ದಶಪಥ ಸವಾಲು ಗೆಲ್ತಾರಾ ದಣಿವರಿಯದ ಧುರಂಧರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್.

First Published Jan 4, 2023, 1:18 PM IST | Last Updated Jan 4, 2023, 1:18 PM IST

10 ರಾಜ್ಯ... 10 ಚುನಾವಣೆ.. ಮೋದಿಗೆ ಸೆಮಿಫೈನಲ್..! 2023ರಲ್ಲಿ ಗಜಕೇಸರಿಗೆ ಮೆಗಾ ಚಾಲೆಂಜ್..! 2023ರ ಚಾಲೆಂಜ್ ಗೆದ್ದರೆ 2024ರಲ್ಲಿ ದೆಹಲಿ ಪಟ್ಟ..! ದಶಪಥ ಸವಾಲು ಗೆಲ್ತಾರಾ ದಣಿವರಿಯದ ಧುರಂಧರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್. ಮೋದಿಗೆ 2023 ಚಾಲೆಂಜ್. ದೇಶ ಗೆದ್ದ ಧುರಂಧರನಿಗೆ ದಶಪಥ ಚಾಲೆಂಜ್.. 2023ರಲ್ಲಿ ಮೋದಿ ಮುಂದೆ 10 ಚಾಲೆಂಜ್. ಮೋದಿಯವರ ಹ್ಯಾಟ್ರಿಕ್ ವಿಜಯದ ಭವಿಷ್ಯ ನಿರ್ಧರಿಸಲಿರೋದೇ ಆ 10 ಸವಾಲುಗಳು. ಹಾಗಾದ್ರೆ 2023ರ ಈ ಹೊಸ ವರ್ಷದಲ್ಲಿ ಗಜಕೇಸರಿ ಮೋದಿಗೆ ಎದುರಾಗಲಿರೋ ಆ 10 ಚಾಲೆಂಜ್'ಗಳ ಗುಟ್ಟೇನು..? ದಶಪಥ ಸವಾಲು ಗೆದ್ದರೆ ಮೋದಿಗೆ 3ನೇ ಬಾರಿ ದೆಹಲಿ ಪಟ್ಟ ಪಕ್ಕಾನಾ..? ಸವಾಲುಗಳಿಗೆ ಸವಾಲ್ ಹಾಕೋ ದಣಿವರಿಯದ ಧುರಂಧರ, 2023ರ ಚಾಲೆಂಜನ್ನು ಮೆಟ್ಟಿ ನಿಲ್ತಾರಾ..? ಮೋದಿಯವರ ಮುಂದಿರೋ ಹೊಸ ವರ್ಷದ ಚಾಲೆಂಜ್'ಗಳ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ. 

ಈಗ ನೀವು ನೋಡಿದ್ದು ಪ್ರಧಾನಿ ಮೋದಿಯವರಿಗೆ 2023ರಲ್ಲಿ ಎದುರಾಗಲಿರೋ ಪೊಲಿಟಿಕಲ್ ಚಾಲೆಂಜ್. ಈ ರಾಜಕೀಯ ಸವಾಲುಗಳನ್ನು ಹೊರತು ಪಡಿಸಿ ಮತ್ತೊಂದಷ್ಟು ಸವಾಲುಗಳ ಮೋದಿಯವರಿಗಾಗಿ ಕಾದು ಕೂತಿವೆ. ಪ್ರಧಾನಿ ಮೋದಿಯವರಿಗೆ ಈ ವರ್ಷ ಸಾಲು ಸಾಲು ವಿಧಾನಸಭಾ ಚುನಾವಣೆಗಳು ಎದುರಾಗಲಿವೆ. 2023ರಲ್ಲಿ ಒಟ್ಟು 10 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಕೇಸರಿ ಸಾಮ್ರಾಜ್ಯ ವಿಸ್ತರಣೆಗೆ ಮೋದಿ ಪಣ ಕೊಟ್ಟಿದ್ದಾರೆ. ಇವೆಲ್ಲಾ ರಾಜಕೀಯ ಸವಾಲುಗಳು,. ಪೊಲಿಟಿಕಲ್ ಚಾಲೆಂಜ್ ಹೊರತಾಗಿ ಈ ವರ್ಷ ಮೋದಿಯವರ ಮುಂದಿರೋ ಮತ್ತಷ್ಟು ಸವಾಲುಗಳಿವೆ. ಹಾಗಂತ 2023ರ ಪೊಲಿಟಿಕಲ್ ಚಾಲೆಂಜ್'ಗಳೆಲ್ಲಾ ಪ್ರಧಾನಿ ಮೋದಿಯವರಿಗೆ ಕೇಕ್ ವಾಕ್ ಅಂತೂ ಅಲ್ಲವೇ ಅಲ್ಲ.

ಅದರ ಸುಳಿವು ಈಗಾಗ್ಲೇ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿ ಬಿಟ್ಟಿದೆ. ಅಷ್ಟಕ್ಕೂ ಮೋದಿಯವರ ಪಾಲಿಗೆ ಹಿಮಾಚಲದಿಂದ ಮೊಳಗಿರೋ ಎಚ್ಚರಿಕೆ ಗಂಟೆಯ ಗುಟ್ಟೇನು? ಮೋದಿ ಸವಾಲುಗಳಿಗೇ ಸವಾಲ್ ಹಾಕಿ ನಿಲ್ಲುವ ಧುರಂಧರ. ಅಸಾಧ್ಯವನ್ನು ಸಾಧಿಸಿ ತೋರಿಸುವ ಛಲಗಾರ. ಅಂಥಾ ಮೋದಿ 2023ರ ಚಾಲೆಂಜ್'ಗಳಿಗೆ ರೆಡಿಯಾಗಿದ್ದಾರೆ. ಈ ಹಿಂದೆ ಸವಾಲುಗಳನ್ನೆಲ್ಲಾ ಗೆದ್ದ ಮಾತ್ರಕ್ಕೆ ಈ ಬಾರಿಯ ಚಾಲೆಂಜ್'ಗಳು ಕೇಸ್ ವಾಕ್ ಅಂತೂ ಅಲ್ಲವೇ ಅಲ್ಲ. ಇದ್ರ ಸುಳಿವನ್ನು ಆಗ್ಲೇ ಕೊಟ್ಟು ಬಿಟ್ಟಿದೆ ಹಿಮಾಚಲ ಪ್ರದೇಶದ ಎಲೆಕ್ಷನ್ ರಿಸಲ್ಟ್. ಒಟ್ಟಿನಲ್ಲಿ 2023ರಲ್ಲಿ ಪ್ರಧಾನಿ ಮೋದಿಯವರ ಮುಂದಿರೋದು ದಶಪಥದ ರೇಸ್. ಆ ರೇಸ್'ನಲ್ಲಿ ಗೆದ್ದರೆ 2024ರ ಮಹಾಭಾರತ ಯುದ್ಧ ಗೆಲ್ಲೋದು ಸುಲಭ.