Asianet Suvarna News Asianet Suvarna News

Omicron Variant: ಹೆಚ್ಚಿನ ಲಸಿಕೆಗಳು ಒಮಿಕ್ರೋನ್ ವಿರುದ್ಧ ಪರಿಣಾಮಕಾರಿಯಲ್ಲ, ಮುಂದೇನು.?

ಭಾರತದಲ್ಲೂ ದಿನೇ ದಿನೇ ಒಮಿಕ್ರೋನ್‌ ಸೋಂಕಿತರ (Omicron Cases)ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಒಂದೇ ದಿನ 156 ಜನರಲ್ಲಿ ಹೊಸ ರೂಪಾಂತರಿ ವೈರಸ್‌ (Covid 19 Variant) ಪತ್ತೆಯಾಗಿದೆ. ಇದು, ಇದುವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿನ ಪ್ರಮಾಣವಾಗಿದೆ.

ಬೆಂಗಳೂರು (ಡಿ. 28):  ಭಾರತದಲ್ಲೂ ದಿನೇ ದಿನೇ ಒಮಿಕ್ರೋನ್‌ ಸೋಂಕಿತರ (Omicron Cases)ಸಂಖ್ಯೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಒಂದೇ ದಿನ 156 ಜನರಲ್ಲಿ ಹೊಸ ರೂಪಾಂತರಿ ವೈರಸ್‌ (Covid 19 Variant) ಪತ್ತೆಯಾಗಿದೆ. ಇದು, ಇದುವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸೋಂಕಿನ ಪ್ರಮಾಣವಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಒಮಿಕ್ರೋನ್‌ ಸೋಂಕಿತರ ಸಂಖ್ಯೆ 578ಕ್ಕೆ ತಲುಪಿದೆ.

Omicron Variant: ದುಡ್ಡು, ಪ್ರಭಾವ ಇದ್ರೆ ಬೆಡ್ ಸಿಗಲ್ಲ, ಬೆಡ್ ಬುಕಿಂಗ್ ದಂಧೆಗೆ ಬ್ರೇಕ್

ಇನ್ನು ಹೆಚ್ಚಿನ ಲಸಿಕೆಗಳು, ಕೋವಿಡ್-19 (Covid 19) ಸಹ ಇದರ ವಿರುದ್ಧ ಪರಿಣಾಮಕಾರಿಯಾಗಿಲ್ಲ ಎಂದು ಸಂಶೋಧನೆ ಹೇಳುತ್ತಿದ್ದು, ಆತಂಕ ಮೂಡಿಸಿದೆ.  ಲಸಿಕೆಯನ್ನು ತೆಗೆದುಕೊಳ್ಳುವ ಜನರು ಓಮಿಕ್ರಾನ್ ಸೋಂಕಿಗೆ (Omicron) ಒಳಗಾದ ನಂತರ ಹೆಚ್ಚು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂಬುದು ಮಾತ್ರ ನೆಮ್ಮದಿಯ ವಿಚಾರವಾಗಿದೆ.

ಸಂಶೋಧನೆಯ ಆರಂಭಿಕ ವರದಿಯ ಪ್ರಕಾರ, ಫೈಝರ್ (Pfizer) ಮತ್ತು ಮಾಡೆರ್ನಾ (Moderna) ಲಸಿಕೆ ಜೊತೆ ಬೂಸ್ಟರ್ ಡೋಸ್‌ ಪಡೆದವರಷ್ಟೇ ಓಮಿಕ್ರಾನ್ ಸೋಂಕಿನಿಂದ ಬದುಕುಳಿಯುತ್ತಾರೆನ್ನಲಾಗಿದೆ. ಆದರೆ ಈ ಎರಡೂ ಲಸಿಕೆಗಳು ಅಮೆರಿಕವನ್ನು ಹೊರತುಪಡಿಸಿ ಕೆಲವೇ ದೇಶಗಳಲ್ಲಿ ಲಭ್ಯವಿದೆ. ಅಸ್ಟ್ರಾಜೆನೆಕಾ, ಜಾನ್ಸನ್ ಆಂಡ್ ಜಾನ್ಸನ್ ಮತ್ತು ರಷ್ಯಾದ ಲಸಿಕೆಗಳು ಓಮಿಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೊರೋನಾ ಮಹಾಮಾರಿಯನ್ನು ತಡೆಯುವುದು ಸುಲಭವಲ್ಲ.

 

Video Top Stories