Asianet Suvarna News Asianet Suvarna News

ಉತ್ತರದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ದಕ್ಷಿಣ ಒಂದೇ ದಾರಿ,ತೆರಿಗೆ ಅಸ್ತ್ರದ ಮಾಸ್ಟರ್ ಪ್ಲಾನ್!

ನನ್ನ ತರಿಗೆ ನನ್ನ ಹಕ್ಕು ಹೋರಾಟ ತೀವ್ರಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಅನ್ನೋ ಗಂಭೀರ ಆರೋಪ ಮುಂದಿಟ್ಟು ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇದೀಗ ಕೇರಳ ಸೇರಿದಂತೆ ದಕ್ಷಿಣದ ಕೆಲ ರಾಜ್ಯಗಳು ಸೇರಿಕೊಳ್ಳುತ್ತಿದೆ. ಉತ್ತರದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಇದೀಗ ದಕ್ಷಿಣ ಭಾರತ ಒಗ್ಗೂಡಿಸಿ ಲೋಕಸಭೆಗೆ ಹೊಸ ಅಸ್ತ್ರ ಝಳಪಿಸಿದೆ.
 

First Published Feb 8, 2024, 2:40 PM IST | Last Updated Feb 8, 2024, 2:40 PM IST

ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ದ ತೆರಿಗೆ ಹಕ್ಕು ಕುರಿತು ಭಾರಿ ಹೋರಾಟ ನಡೆಸುತ್ತಿದೆ. ಕರ್ನಾಟಕ ಅತ್ಯಧಿಕ ತೆರಿಗೆ ಕಟ್ಟಿದರೂ ನಮಗೆ ಅತ್ಯಲ್ಪ ಪಾಲು ನೀಡಲಾಗುತ್ತಿದೆ. ನಮ್ಮಿಂದ ಪಡೆದ ಹಣವನ್ನು ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಇತರ ರಾಜ್ಯಗಳಿಗೆ ವಿನಿಯೋಗಿಸಲಾಗುತ್ತಿದೆ ಅನ್ನೋ ಆರೋಪವನ್ನು ಕಾಂಗ್ರೆಸ್ ಮಾಡಿದೆ. ದೆಹಲಿ ಜಂತರ್ ಮಂತರ್‌ನಲಿ ಹೋರಾಟ, ಪ್ರತಿಭಟನೆ ನಡೆಸಿದೆ. ಇದೀಗ ಕೇರಳ ಕೂಡ ತೆರಿಗೆ ವಿಚಾರದಲ್ಲಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಹೋರಾಟಕ್ಕೆ ಮತ್ತಷ್ಟು ಕಾವು ಸಿಕ್ಕಿದೆ. ಲೋಕಸಭೆ ಚುನಾವಣೆಗೆ ಬಿಜೆಪಿ ರಾಮ ಮಂದಿರ, 3ನೇ ಅತಿ ದೊಡ್ಡ ಆರ್ಥಿಕತೆ, ರಾಮ ಮಂದಿರ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಸರ್ಕಾರ ಪ್ರಚಾರ ಮಾಡಲಿದೆ. ಆದರೆ ಕಾಂಗ್ರೆಸ್‌ಗೆ ಸಮರ್ಥ ವಾದವಿಲ್ಲದೆ ಸೊರಗಿತ್ತು. ಇದೀಗ ಪ್ರಾದೇಶಿಕ ಅಸ್ತ್ರ ಝಳಪಿಸಿ ದಕ್ಷಿಣ ಭಾರತ ಒಗ್ಗೂಡಿಸಲು ಮುಂದಾಗಿದೆ.