Asianet Suvarna News Asianet Suvarna News

ರಷ್ಯಾ ಉಕ್ರೇನ್‌ ಯುದ್ಧ: ಉಕ್ರೇನ್‌ನಲ್ಲಿ ಸಿಲುಕಿ ಒದ್ದಾಡುತ್ತಿರುವ 300 ಕನ್ನಡಿಗರು

ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು ವಿಡಿಯೋ ಕಾಲ್‌ ಮೂಲಕ ತಮ್ಮ ಸಂಕಷ್ಟವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. 
 

First Published Feb 26, 2022, 9:35 AM IST | Last Updated Feb 26, 2022, 9:39 AM IST

ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್‌ ಸಂಪೂರ್ಣ ನಲುಗಿದ್ದು, ಯುದ್ಧದ ಮೂರನೇ ದಿನ ಉಕ್ರೇನ್‌ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಾಗಿದ್ದು, ಬಹುತೇಕ ರಷ್ಯಾಗೆ ಶರಣಾದಂತಿದೆ. ಈ ಎರಡು ದೇಶಗಳ ನಡುವಿನ ಯುದ್ಧದಿಂದಾಗಿ ಬರೀ ಈ ಎರಡು ದೇಶಗಳಲ್ಲದೇ ಇಡೀ ಜಗತ್ತು ಸಂಕಷ್ಟ ಎದುರಿಸುತ್ತಿದೆ. ಉಕ್ರೇನ್‌ನಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗವನ್ನು ಮಾಡುತ್ತಿದ್ದಾರೆ. ಅಲ್ಲಿ ಕರ್ನಾಟಕದ 300 ವಿದ್ಯಾರ್ಥಿಗಳು ಸೇರಿದಂತೆ ದೇಶದ ಹಲವು ವಿದ್ಯಾರ್ಥಿಗಳು ಕೂಡ ಸಿಲುಕಿಕೊಂಡಿದ್ದು ಭಾರತ ಸರ್ಕಾರ ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದೆ. ಈ ಮಧ್ಯೆ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವಿಡಿಯೋ ಕಾಲ್‌ ಮೂಲಕ ತಮ್ಮ ಸಂಕಷ್ಟವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.