PFI ನಿಷೇಧದ ಬೆನ್ನಲ್ಲೇ ಸ್ಫೋಟಕ ವರದಿ ಬಹಿರಂಗ

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯು ಅಲ್‌ಕೈದಾ ಹಾಗೂ ಐಸಿಸ್‌ ಜೊತೆ ಸಂಪರ್ಕ ಹೊಂದಿದೆ ಎಂದು ಕೇರಳದ ನ್ಯಾಯಾಲಯದ ಮುಂದೆ ಸಲ್ಲಿಸಿದ ವರದಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.

First Published Dec 21, 2022, 2:59 PM IST | Last Updated Dec 21, 2022, 2:59 PM IST

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯು ಅಲ್‌ಕೈದಾ ಹಾಗೂ ಐಸಿಸ್‌ ಜೊತೆ ಸಂಪರ್ಕ ಹೊಂದಿದೆ ಎಂದು ಕೇರಳದ ನ್ಯಾಯಾಲಯದ ಮುಂದೆ ಸಲ್ಲಿಸಿದ ವರದಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ. ಪಿಎಫ್‌ಐ ನಾಯಕರು ವಿವಿಧ ವಿಧಾನಗಳ ಮೂಲಕ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತನಿಖಾ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ. ನಿಷೇಧಿತ ಸಂಘಟನೆಯು ರಹಸ್ಯ ವಿಭಾಗವನ್ನು ನಡೆಸುತ್ತಿದೆ. ಅವರು ಅದನ್ನು ಬೇರೆ ಸಮಯದಲ್ಲಿ ಬಹಿರಂಗಪಡಿಸಲು ಬಯಸಿದ್ದರು ಎಂದು ಎನ್ಐಎ ಹೇಳಿಕೊಂಡಿದೆ. ಪಿಎಫ್‌ಐ ಬ್ಯಾನ್‌ ಆದ ನಂತರವೂ ಸ್ಲೀಪರ್ ಸೆಲ್ ಸಕ್ರಿಯವಾಗಿದ್ದು, ಸರ್ಕಾರ ಈ ಬಗ್ಗೆ ಕ್ರಮವನ್ನು ವಹಿಸಬೇಕೆಂದು ತನ್ನ ವರದಿಯಲ್ಲಿ ಎನ್‌ಐಎ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.