Asianet Suvarna News Asianet Suvarna News

ಕ್ರಿಶ್ಚಿಯನ್ ದೇಶ ಬ್ರಿಟನ್‌ನಲ್ಲಿ ಇಸ್ಲಾಮೀಕರಣ, 2035ಕ್ಕೆ ಮುಸ್ಲಿಮ್ ಬಹುಸಂಖ್ಯಾತ ದೇಶ!

ರೌಡಿ ಶೀಟರ್ ರಾಜಕೀಯ, ಬಿಜೆಪಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್, ಕೈ ಪಡೆಗೂ ರೌಡಿ ಶೀಟರ್ ನಂಟು, ಸಿದ್ರಾಮುಲ್ಲಾ ಖಾನ್, ಸಿಟಿ ರವಿ ಹೇಳಿಕೆ ವಿವಾದ ಸೇರಿದಂತೆ ಇಂದಿನ ಇಡೀ ದಿನ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಯೂರೋಪಿಯನ್ ರಾಷ್ಟ್ರಗಳು ವೇಗವಾಗಿ ಇಸ್ಲಾಮೀಕರಣಗೊಳ್ಳುತ್ತಿದೆ ಅನ್ನೋ ಆರೋಪಕ್ಕೆ ಇದೀಗ ಸಾಕ್ಷ್ಯ ಸಿಕ್ಕಿದೆ. ಬ್ರಿಟನ್‌ನಲ್ಲಿ ಬ್ರಿಟೀಷರ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗಿದೆ. ಇದೇ ವೇಳೆ ಇಸ್ಲಾಮ್ ಸಂಖ್ಯೆ ದುಪ್ಪಟ್ಟಾಗಿದೆ. 2001ರಲ್ಲಿ ಬ್ರಿಟನ್‌ನಲ್ಲಿ ಶೇಕಡಾ 3ರಷ್ಟಿದ್ದ ಮುಸ್ಲಿಮರ ಸಂಖ್ಯೆ 2021ರ ವೇಳೆಗೆ ಶೇಕಡಾ 6.5ಕ್ಕೆ ಏರಿಕೆಯಾಗಿದೆ. ಇತ್ತ ಬ್ರಿಟನ್ ಕ್ರಿಶ್ಚಿಯನ್ ಜನಸಂಖ್ಯೆ 2011ರಲ್ಲಿ 3.3 ಕೋಟಿ ಇದ್ದರೆ, 2021ರಲ್ಲಿ 2.75 ಕೋಟಿಗೆ ಇಳಿಕೆಯಾಗಿದೆ. ಇದೀಗ ಜನಸಂಖ್ಯಾ ಗಣತಿ ವರದಿಯಲ್ಲಿ ಮತ್ತೊಂದು ಅಂಶ ಉಲ್ಲೇಖಿಸಲಾಗಿದೆ. 2035ರ ವೇಳೆಗೆ ಬ್ರಿಟನ್ ಮುಸ್ಲಿಮ್ ಬಹುಸಂಖ್ಯಾತ ದೇಶವಾಗಲಿದೆ ಎಂದಿದೆ. ಈ ಅಪಾಯ ಭಾರತಕ್ಕೂ ಇದೆ. ಇದೇ ಕಾರಣಕ್ಕೆ ಇತ್ತೀಚೆಗೆ ಭಾರತದಲ್ಲಿ ಜನಸಂಖ್ಯಾ ಅಸಮತೋಲನ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.