Asianet Suvarna News Asianet Suvarna News

IAF Chopper Crash: ಉನ್ನತ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಪಾಲಿಸಲೇಬೇಕಾದ ಪ್ರೊಟೋಕಾಲ್‌ಗಳೇನು?

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್
*ಇಲ್ಲಿದೆ ಉನ್ನತ ಅಧಿಕಾರಿಗಳು ಪ್ರಯಾಣಿಸುವಾಗ ಪಾಲಿಸಬೇಕಾದ ಪ್ರೊಟೋಕಾಲ್‌ ಮಾಹಿತಿ!

ವೆಲ್ಲಿಂಗ್ಟನ್(ಡಿ.08): ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಂಡಿದ್ದು, ಭಾರತೀಯ ವಾಯುಪಡೆಯ ಎಂಐ-17 ವಿ5 ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ (CDS General Bipin Rawat), ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಈ ಅಪಘಾತದಲ್ಲಿ  ಗಂಭೀರ ಗಾಯಗೊಂಡಿರುವ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (Group Captain Varun Singh) ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಐಎಎಫ್ ಟ್ವೀಟ್‌ನಲ್ಲಿ (IAF Tweet) ತಿಳಿಸಿದೆ̤

General Bipin Rawat Death: ಜನರಲ್ ಬಿಪಿನ್ ರಾವತ್ ಅತ್ಯುತ್ತಮ ಸೈನಿಕ, ನಿಜವಾದ ದೇಶಭಕ್ತ : ಪ್ರಧಾನಿ ಮೋದಿ!

ಈ ಘಟನೆಯಿಂದ ಇಡೀ ದೇಶವೇ ದಿಗ್ಭ್ರಾಂತಗೊಂಡಿದೆ. ಈ ಬೆನ್ನಲ್ಲೇ ಉನ್ನತ ಅಧಿಕಾರಿಗಳು ವಿಮಾನ ಅಥವಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ ಪಾಲಿಸಬೇಕಾದ ಪ್ರೋಟೋಕಾಲ್‌ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ (Asianet Suvarna News) ಜತೆಗೆ ಮಾತನಾಡಿರುವ ಮೇಜರ್‌ ಜನರಲ್‌ ನಂಜಪ್ಪ (Major General Nanjappa) ಈ ಬಗ್ಗೆ ಮಾಹಿತಿ ನೀಡಿದ್ದಾರೆ. VIP ಗಳ ಪ್ರಯಾಣಕ್ಕಾಗ್ಗಿಯೇ ಹೆಲಿಕಾಪ್ಟರ್‌ಗಳನ್ನು ಮಾಡಿಫೈ (Modfify) ಮಾಡಿರುತ್ತಾರೆ ಅಲ್ಲದೇ ವಿಶೇಷ ತರಬೇತಿ ಪಡೆದಿರುವ ಪೈಲಟ್‌ಗಳನ್ನು (Pilo) ನೇಮಿಸುತ್ತಾರೆ ಎಂದು ಹೇಳಿದ್ದಾರೆ.
 

Video Top Stories