Asianet Suvarna News Asianet Suvarna News

UP Poll ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರನ ಬಳಿ ಹೋದ ಬಿಜೆಪಿ

ಉತ್ತರ ಪ್ರದೇಶದಲ್ಲಿ ಇನ್ನೆರಡು ಹಂತದ ಚುನಾವಣೆಗಳು ಬಾಕಿ ಇವೆ. ಉತ್ತರ ಪ್ರದೇಶ ಚುನಾವಣೆಗಳಲ್ಲಿ ಭಾವನಾತ್ಮಕ ವಿಚಾರಗಳು ಮಹತ್ವದ ಪಾತ್ರವನ್ನು ವಹಿಸುತ್ತಿರುವುದು ಹೊಸ ಅಂಶವೇನಲ್ಲ. ಆಡಳಿತರೂಢ ಬಿಜೆಪಿಯ ನಾಯಕರು ಅಭಿವೃದ್ಧಿಯ ಜೊತೆಗೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರನ ಬಳಿ ಹೋಗಿದ್ದಾರೆ.

First Published Mar 2, 2022, 6:36 PM IST | Last Updated Mar 2, 2022, 6:36 PM IST

ಉತ್ತರ ಪ್ರದೇಶದಲ್ಲಿ ಇನ್ನೆರಡು ಹಂತದ ಚುನಾವಣೆಗಳು ಬಾಕಿ ಇವೆ. ಉತ್ತರ ಪ್ರದೇಶ ಚುನಾವಣೆಗಳಲ್ಲಿ ಭಾವನಾತ್ಮಕ ವಿಚಾರಗಳು ಮಹತ್ವದ ಪಾತ್ರವನ್ನು ವಹಿಸುತ್ತಿರುವುದು ಹೊಸ ಅಂಶವೇನಲ್ಲ. ಆಡಳಿತರೂಢ ಬಿಜೆಪಿಯ ನಾಯಕರು ಅಭಿವೃದ್ಧಿಯ ಜೊತೆಗೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರನ ಬಳಿ ಹೋಗಿದ್ದಾರೆ.

UP Election ಬಿಜೆಪಿ ನಾಯಕರ ಅಸ್ತ್ರಕ್ಕೆ ಅಖಿಲೇಶ್ ಯಾದವ್ ಪ್ರತ್ಯಸ್ತ್ರ

ಯೋಗಿ ಆದಿತ್ಯನಾಥ್ ತಮ್ಮ ಸರ್ಕಾರದ ಸಾಧನೆಗಳನ್ನು  ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ನಾವು ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ, ಎಸ್‌ಪಿ, ಬಿಎಸ್ಪಿ ಅಥ್ವಾ ಕಾಂಗ್ರೆಸ್‌ನಿಂದ ರಾಮಮಂದಿರ ನಿರ್ಮಾಣ ಕಾರ್ಯ ಸಾಧ್ಯವಾಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

ಅದರ ಹೊರತಾಗಿ ಬಡವರಿಗೆ ಅಗತ್ಯವಿರುವ ಪ್ರತಿಯೊಂದು ಸೌಲಭ್ಯಗಳು ಸಿಗುವ ಹಾಗೆ ಮಾಡಿದ್ದೇವೆ. ಉಚಿತ ರೇಶನ್, ವಿದ್ಯುತ್ ಸಂಪರ್ಕ, ಎಲ್ಪಿಜಿ ಗ್ಯಾಸ್, ಸಹಾಯಧನ, ಪಿಂಚಣಿ ಮುಂತಾದ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ. ಇದೆಲ್ಲಾ ಸಾಧ್ಯವಾಗಬೇಕಾದ್ರೆ ರಾಜ್ಯದಲ್ಲಿ  ಇಚ್ಛಾಶಕ್ತಿವುಳ್ಳ ಸರ್ಕಾರ ಬೇಕು ಎಂದು ಸಮಾಜವಾದಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.