Asianet Suvarna News Asianet Suvarna News

Uttar Pradesh: ಚುನಾವಣಾ ಅಖಾಡದಲ್ಲಿ ಅಕ್ರಮದ ಶಂಕೆ, ರೈತರಿಗೆ ಕಾವಲು ಕಾಯಲು ಟಿಕಾಯತ್ ಮನವಿ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನಕ್ಕೂ ಮುನ್ನ, ರೈತ ಮುಖಂಡ ರಾಕೇಶ್ ಟಿಕಾಯತ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮತ ಎಣಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಟಿಕಾಯತ್, ರಾಜ್ಯದಲ್ಲಿ ಕನಿಷ್ಠ 70 ಸ್ಥಾನಗಳಲ್ಲಿ ಸೋಲನುಭವಿಸಿದ ಅಭ್ಯರ್ಥಿಗೆ ಗೆಲುವಿನ ಪ್ರಮಾಣ ಪತ್ರ ನೀಡಬಹುದು ಎಂದಿದ್ದಾರೆ. ಇದೇ ವೇಳೆ ಮತದಾನದ ನಂತರ ಇವಿಎಂ ಇರಿಸಿರುವ ಸ್ಥಳಗಳಲ್ಲಿ ಕಾವಲು ಕಾಯುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.

First Published Mar 7, 2022, 8:45 AM IST | Last Updated Mar 7, 2022, 8:45 AM IST

ಲಕ್ನೋ(ಮಾ.07): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನಕ್ಕೂ ಮುನ್ನ, ರೈತ ಮುಖಂಡ ರಾಕೇಶ್ ಟಿಕಾಯತ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮತ ಎಣಿಕೆಯಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಟಿಕಾಯತ್, ರಾಜ್ಯದಲ್ಲಿ ಕನಿಷ್ಠ 70 ಸ್ಥಾನಗಳಲ್ಲಿ ಸೋಲನುಭವಿಸಿದ ಅಭ್ಯರ್ಥಿಗೆ ಗೆಲುವಿನ ಪ್ರಮಾಣ ಪತ್ರ ನೀಡಬಹುದು ಎಂದಿದ್ದಾರೆ. ಇದೇ ವೇಳೆ ಮತದಾನದ ನಂತರ ಇವಿಎಂ ಇರಿಸಿರುವ ಸ್ಥಳಗಳಲ್ಲಿ ಕಾವಲು ಕಾಯುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ಬಿಜೆಪಿ ಸರಕಾರ ಮತ ಎಣಿಕೆಯಲ್ಲಿ ಅಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅಕ್ರಮವೆಸಗಿ ಕನಿಷ್ಠ 70 ಸ್ಥಾನಗಳನ್ನು ಗೆಲ್ಲಲು ಸಿದ್ಧತೆ ನಡೆಸಲಾಗುತ್ತಿದೆ ಎಂದಿರುವ ಅವರು ಮತ ಎಣಿಕೆಗೆ ಒಂದು ರಾತ್ರಿ ಮೊದಲು ರೈತರು ಹಾಗೂ ಇತರೆ ಮತದಾರರು ಮತ ಎಣಿಕೆ ಸ್ಥಳದ ಸುತ್ತ ಜಮಾಯಿಸುವಂತೆ ಮನವಿ ಮಾಡಿದ್ದಾರೆ. ನಿಮ್ಮ ಮೇಲ್ವಿಚಾರಣೆಯಲ್ಲಿ ಎಣಿಕೆಯನ್ನು ಮಾಡಿ. ಅಕ್ರಮ ಎಸಗಿದ್ದಾರೆಂಬ ಅನುಮಾನ ಹುಟ್ಟಿದರೆ, ಶಾಂತಿಯುತವಾಗಿ ಮತ್ತೆ ಎಣಿಕೆಯನ್ನು ಮಾಡಿ ಎಂದಿದ್ದಾರೆ

Video Top Stories