Asianet Suvarna News Asianet Suvarna News

ಕ್ಷಣದಲ್ಲೇ ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಬೃಹತ್ ಸೇತುವೆ

Aug 6, 2021, 9:10 AM IST

ಮಧ್ಯಪ್ರದೇಶದಲ್ಲಿ ಭೀಕರ ಪ್ರವಾಹ ಹೆಚ್ಚಾಗಿದ್ದು ನೋಡು ನೋಡುತ್ತಲೇ ಬೃಹತ್ ಸೇತುವೆ ಕೊಚ್ಚಿ ಹೋಗಿದೆ. ಕ್ಷಣಾರ್ಧದಲ್ಲಿ ಸೇತುವೆ ಕೊಚ್ಚಿ ಹೋದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪ್ರವಾಹ ನೀರು ಸಾವಿನ ರೂಪದಲ್ಲಿ ಹರಿದು ಬಂದಿದ್ದು ಬಹಳಷ್ಟು ಜನರ ಜೀವನದ ಅತಂತ್ರವಾಗಿದೆ.

ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕು, ಕೃಷ್ಣಾ ತೀರದಲ್ಲಿ ನೀರವ ಮೌನ, ಸಂಕಷ್ಟದಲ್ಲಿ ಸಂತ್ರಸ್ತರು!

ಸೇತುವೆ ದಾಟಲು ಜನರು ಕಾದು ನಿಂತಿದ್ದರು. ಆದರೆ ಕ್ರಮೇಣ ಪ್ರವಾಹ ಹೆಚ್ಚಾಗಿ ನೋಡು ನೋಡುತ್ತಿದ್ದಂತೆಯೇ ನೀರು ಕೊಚ್ಚಿ ಹೋಗಿದೆ. ಮಧ್ಯಪ್ರದೇಶದ ಧಾಟಿಯಾ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಧಿಖೇಡ ಅಣೆಕಟ್ಟಿನ ಗೇಟು ತೆರೆದಿದ್ದರು. ಇದರಿಂದ ಸಿಂಧ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರ ಪರಿಣಾಮ ಧಾಟಿಯಾವನ್ನು ಸಂಪರ್ಕಿಸುವ ಬೃಹತ್ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.