ಅನ್ನದಾತನ ಹೋರಾಟ: ದೆಹಲಿ, ಹರ್ಯಾಣ ಗಡಿಯಲ್ಲೂ ಭಾರತ್ ಬಂದ್ ಬಿಸಿ!

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು ಹದಿಮೂರನೇ ದಿನಕ್ಕೆ ತಲುಪಿದೆ. ಭಾರತ್ ಬಂದ್ ಹಿನ್ನೆಲೆ ದೆಹಲಿ, ಹರ್ಯಾಣ ಗಡಿಗೂ ಬಿಸಿ ಮುಟ್ಟಿದೆ. ಇಲ್ಲೂ ಮೋದಿ ಸರ್ಕಾರದ ವಿರುದ್ಧ ಗುಡುಗಿದ ರೈತರು ಕೃಷಿ ಕಾನೂನು ರದ್ದುಗೊಳಿಸುವಂತೆ ಧ್ವನಿ ಎತ್ತಿದ್ದಾರೆ. 

First Published Dec 8, 2020, 4:41 PM IST | Last Updated Dec 8, 2020, 4:42 PM IST

ನವದೆಹಲಿ(ಡಿ.08) ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಂದು ಹದಿಮೂರನೇ ದಿನಕ್ಕೆ ತಲುಪಿದೆ. ಭಾರತ್ ಬಂದ್ ಹಿನ್ನೆಲೆ ದೆಹಲಿ, ಹರ್ಯಾಣ ಗಡಿಗೂ ಬಿಸಿ ಮುಟ್ಟಿದೆ. ಇಲ್ಲೂ ಮೋದಿ ಸರ್ಕಾರದ ವಿರುದ್ಧ ಗುಡುಗಿದ ರೈತರು ಕೃಷಿ ಕಾನೂನು ರದ್ದುಗೊಳಿಸುವಂತೆ ಧ್ವನಿ ಎತ್ತಿದ್ದಾರೆ. 

ಭಾರತ್ ಬಂದ್: ಕರ್ನಾಟಕದ ಸ್ಥಿತಿ ವಿವರಿಸಿದ ಕುರುಬೂರು ಶಾಂತಕುಮಾರ್

ಒಂದೆಡೆ ರೈತರು ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಅತ್ತ ಸರ್ಕಾರ ಕೆಲ ಬದಲಾವಣೆಗಳನ್ನು ಮಾಡಿ ಇದನ್ನು ಜಾರಿಗೊಳಿಸಲು ರೈತರ ಮನವೊಲಿಸುತ್ತಿದ್ದಾರೆ. ಹೀಗ್ಇದ್ದರೂ ರೈತರು ಹಾಗೂ ಸರ್ಕಾರದ ನಡುವಿನ ಈ ಮಾತುಕತೆ ಫಲಿಸುತ್ತಿಲ್ಲ.