Asianet Suvarna News Asianet Suvarna News

Exclusive: ಯುಪಿಯಲ್ಲಿ ಸಮಾಜವಾದಿ ಪಕ್ಷ ಗೆಲುವು ಪಕ್ಕಾ, ಬಿಜೆಪಿ ನೆಲಕಚ್ಚಲಿದೆ ಎಂದ ಅಖಿಲೇಶ್!

ಉತ್ತರ ಪ್ರದೇಶ ಚುನಾವಣೆ ಸದ್ಯ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೇರುತ್ತಾ ಅಥವಾ ಅಖಿಲೇಶ್ ಯಾದವ್ ಸಡ್ಡು ಹೊಡೆಯುತ್ಥಾರಾ? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮುಂದಿನ ಲೋಕಸಭಾ ಚುನಾವಣೆ ವಿಚಾರದಲ್ಲೂ ಈ ವಿಧಾನಸಭೆ ಚುನಾವಣೆ ಬಹಳಷ್ಟು ಪ್ರಮುಖ ಪಾತ್ರ ವಹಿಸಲಿದೆ. ಈಗಾಗಲೇ ಉತ್ತರ ಪಗ್ರದೆಶದಲ್ಲಿ ಎರಡು ಹಂತದ ಮತದಾನ ನಡೆದಿದೆ. ಹೀಗಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೆಶ್ ಯಾದವ್ ಏಷ್ಯಾನೆಟ್‌ ನ್ಯೂಸ್‌ ಜೊತೆ ಮಾತನಾಡಿದ್ದು, ಉತ್ತರ ಪ್ರದೇಶ ಚುನಾವಣೆ ವಿಚಾರವಾಗಿ ಮಾತನಾಡಿದ್ದು, ಬಿಜೆಪಿ ಈ ಬಾರಿ ನೆಲಕಚ್ಚಲಿದೆ ಎಂದಿದ್ದಾರೆ

First Published Feb 16, 2022, 10:35 AM IST | Last Updated Feb 16, 2022, 10:35 AM IST

ಲಕ್ನೋ(ಫೆ.16): ನಾವೆಲ್ಲರೂ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆತ್ತೆಸೆಯಲು ಬಯಸುತ್ತೇವೆ. ಮತದಾರರು ಸಮಾಜವಾದುಇ ಪಕ್ಷದ ಪರ ಮತ ಚಲಾಯಿಸಿದ್ದಾರೆ. ಮೊದಲೆರಡು ಹಂತದ ಚುನಾವಣೆಯಲ್ಲಿ ಸಿಕ್ಕ ಅಂಕಿ ಅಂಶಗಳ ಅನ್ವಯ ಬಿಜೆಪಿ ಯುಪಿಯಿಂದ ಕೊಚ್ಚಿಹೋಗಲಿದೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಗೆಲ್ಲುವ ಭರವಸೆ ವ್ಯಕ್ತಪಡಿಸುತ್ತಿದೆಯಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಅವರ ಮಾತು, ಭಾವದಿಂದ ಅವರಲ್ಲಿರುವ ಸೋಲಿನ ಭಯ ಬಹಿರಂಗವಾಗುತ್ತಿದೆ. ಸರ್ಕಾರದ ವಿಚಾರ ಬಿಟ್ಟು, ಅಸಂಬದ್ಧ ವಿಚಾರಗಳನ್ನು ಮಾತನಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ಕೇರಳ ವಿಚಾರವಾಗಿ ಸಿಎಂ ಯೋಗಿ ಕೊಟ್ಟಿದ್ದ ಹೇಳಿಕೆಯನ್ನು ಖಂಡಿಸಿದ ಅಖಿಲೇಶ್ ಯಾದವ್, ಯುಪಿಗಿಂತ ಕೇರಳ ಅಭಿವೃದ್ಧಿಯಲ್ಲಿ ಮುಂದಿದೆ. ಹೀಗಿರುವಾಗ ನಮ್ಮ ರಾಜ್ಯವನ್ನು ಕೇರಳದಂತಾಗಲು ಬಿಡುವುದಿಲ್ಲ ಎಂದ ಯೋಗಿ ಹೇಳಿಕೆ ಒಪ್ಪುವಂತದ್ದಲ್ಲ ಎಂದಿದ್ದಾರೆ. ನಮ್ಮ ಮುಖ್ಯಮಂತ್ರಿಗೆ ಯಾರನ್ನು ಯಾರ ಜೊತೆ ಹೋಲಿಸಬೇಕೆಂಬ ಜ್ಞಾನ ಇಲ್ಲ, ಅವರಿಗೆ ಕೇವಲ ಹಿಂದೂ, ಮುಸ್ಲಿಂ ವಿಚಾರ ತೆಗೆದು ಗಲಭೆ ಹುಟ್ಟಿಸುವುದರಲ್ಲೇ ಆಸಕ್ತಿ ಇದೆ. ಇಲ್ಲಿನ ಅಭಿವೃದ್ಧಿ ಬಗ್ಗೆ ತಲೆ ಕೊಡಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಅಲ್ಲದೇ ಈ ಬಾರಿ ಜನರು ಬಿಜೆಪಿಯನ್ನು ಕೆಳಗಿಳಿಸಲು ಬಯಸುತ್ತಿದ್ದಾರೆ. ಐದು ವರ್ಷ ಇಲ್ಲಿನ ಜನರಿಗೆ ಅವರು ಮೋಸ ಮಾಡಿದ್ದಾರೆ, ಸುಳ್ಳು ಭರವಸೆ ಕೊಟ್ಟಿದ್ದಾರೆ ಎಂದೂ ಕಿಡಿ ಕಾರಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸಹಾಯವನ್ನು ನಿರಾಕರಿಸಿದ ಅಖಿಲೇಶ್, ಕೈ ಹಾಗೂ ಕಮಲ ಪಾಳಯ ಎರಡೂ ನಮ್ಮನ್ನು ಸೋಲಿಸಲು ಪೈಪೋಟಿಗಿಳಿದಿವೆ. ಹೀಗಾಗಿ ನಮ್ಮ ಮೈತ್ರಿ ಜೊತೆಯೇ ಸರ್ಕಾರ ರಚಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಖಿಲೇಶ್ ಯಾದವ್ ಜೊತೆ ಏಷ್ಯಾನೆಟ್‌ ನ್ಯೂಸ್‌ ನಡೆಸಿದ ಸಂದರ್ಶನದ ತುಣುಕು ಇಲ್ಲಿದೆ ನೋಡಿ

Video Top Stories