Asianet Suvarna News Asianet Suvarna News

ಪ್ರವಾಸೋದ್ಯಮಕ್ಕೆ ತಟ್ಟಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಬಿಸಿ!

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದ್ದು, ಹಿಂಸಾಚಾರವೂ ನಡೆದಿತ್ತು. ಆದರೀಗ ಈ ಪ್ರತಿಭಟನೆಯ ಬಿಸಿ ಭಾರತದ ಪ್ರವಾಸೋದ್ಯಮಕ್ಕೂ ತಟ್ಟಿದೆ. ಭಾರತದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಭಾರತ ಪ್ರವಾಸ ರದ್ದುಗೊಳಿಸುವಂತೆ ಸುಮಾರು 7 ರಾಷ್ಟ್ರಗಳು ತಮ್ಮ ನಾಗರಿಕರಿಗೆ ಎಚ್ಚರಿಸಿದೆ.

ನವದೆಹಲಿ(ಡಿ.31): ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದ್ದು, ಹಿಂಸಾಚಾರವೂ ನಡೆದಿತ್ತು. ಆದರೀಗ ಈ ಪ್ರತಿಭಟನೆಯ ಬಿಸಿ ಭಾರತದ ಪ್ರವಾಸೋದ್ಯಮಕ್ಕೂ ತಟ್ಟಿದೆ. ಭಾರತದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಭಾರತ ಪ್ರವಾಸ ರದ್ದುಗೊಳಿಸುವಂತೆ ಸುಮಾರು 7 ರಾಷ್ಟ್ರಗಳು ತಮ್ಮ ನಾಗರಿಕರಿಗೆ ಎಚ್ಚರಿಸಿದೆ.ಈಗಾಗಲೇ ಪೊಲೀಸರ ಹಾಗೂ ಪ್ರತಿಭಟನಾಕಾರರ ನಡುವಿನ ಗಲಭೆಯಿಂದಾಗಿ ಕನಿಷ್ಟ 25 ಮಂದಿ ಮೃತಪಟ್ಟಿದ್ದಾರೆ. ಹೀಗಿದ್ದರೂ ಪ್ರತಿಭಟನೆ ಮಾತ್ರ ಇನ್ನೂ ಮುಂದುವರೆದಿದೆ. ಕಳೆದ ಎರಡು ವಾರದಲ್ಲಿ ದೇಶ ಹಾಗೂ ವಿದೇಶದ ಸುಮಾರು 2 ಲಕ್ಷ ಪ್ರವಾಸಿಗರು, ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾದ ತಾಜ್ ಮಹಲ್ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇನ್ನು ಕೆಲವರು ಇದನ್ನು ಮುಂದೂಡಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಮೃತಶಿಲೆಯಿಂದ ನಿರ್ಮಿಸಲಾದ 17ನೇ ಶತಮಾನದ ಈ ಸ್ಮಾರಕ ಉತ್ತರ ಪ್ರದೇಶದಲ್ಲಿದೆ. ದೇಶದಲ್ಲಿ ಕಳೆದೆರಡು ವಾರದಿಂದ ನಡೆಯುತ್ತಿರುವ ಪೌರತ್ವ ವಿರೋಧಿ ಪ್ರತಿಭಟನೆಗೆ ಉತ್ತರ ಭಾರತದ ಈ ರಾಜ್ಯದಲ್ಲಿ ಅತಿ ಹೆಚ್ಚು ಹಿಂಸಾಚಾರ ಹಾಗೂ ಸಾವು ನೋವು ಸಂಭವಿಸಿದೆ ಎಂಬುವುದು ಉಲ್ಲೇಖನೀಯ. ಇನ್ನು ತಾಜ್ ಮಹಲ್ ಆಸು ಪಾಸಿನ ಅತಿಥಿ ಗೃಹ ಹಾಗೂ ಲಕ್ಸುರಿ ಹೋಟೇಲ್ ಮ್ಯಾನೇಜರ್ ಗಳು ಈ ಕುರಿತು ಪ್ರತಿಕ್ರಿಯಿಸುತ್ತಾ 'ದೇಶದ ಆರ್ಥಿಕ ಸ್ಥಿತಿ ಕಳೆದ 6 ವರ್ಷಗಳಲ್ಲಿ ಅತ್ಯಂತ ಕಡಿಮೆ, ಅಂದರೆ ಶೇ. 4.5ಕ್ಕೆ ಕುಸಿದಿದೆ. ಹೀಗಿರುವಾಗ ಹಬ್ಬದ ಸೀಜನ್ ನಲ್ಲಿ ಕೊನೆಯ ಕ್ಷಣದಲ್ಲಿ ಬುಕ್ಕಿಂಗ್ ಕ್ಯಾನ್ಸಲ್ ಆಗಿರುವುದರಿಂದ ಉದ್ಯಮಕ್ಕೆ ಭಾರೀ ಹೊಡೆತ ಕೊಟ್ಟಿದೆ' ಎಂದಿದ್ದಾರೆ.

Video Top Stories