Chitradurga: ದೇವರ ಎತ್ತುಗಳಿಗೆ ಮೆರವಣಿಗೆ, ವಿಶೇಷ ಪೂಜೆ, ಮ್ಯಾಸ ಬೇಡರಿಂದ ವಿಶೇಷ ಜಾತ್ರೆ
ಜಾತ್ರೆಗಳ (Fest) ಸಂದರ್ಭದಲ್ಲಿ ದೇವರುಗಳ ಮೆರವಣಿಗೆ, ಪೂಜಾ ಕೈಂಕರ್ಯಗಳು ಇರುವುದು ಸಹಜ. ಆದ್ರೆ ಈ ಭಾಗದ ಜನರು ತಮ್ಮ ಸಮುದಾಯದ ಸಂಪ್ರದಾಯ ಉಳುವಿಗಾಗಿ ದೇವರ ಎತ್ತುಗಳನ್ನು ಮೆರವಣಿಗೆ ಮಾಡಿ ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಭಿನ್ನವಾಗಿ ಜಾತ್ರೆ ಮಾಡ್ತಾರೆ.
ಚಿತ್ರದುರ್ಗ (ಜ. 10): ಜಾತ್ರೆಗಳ (Fest) ಸಂದರ್ಭದಲ್ಲಿ ದೇವರುಗಳ ಮೆರವಣಿಗೆ, ಪೂಜಾ ಕೈಂಕರ್ಯಗಳು ಇರುವುದು ಸಹಜ. ಆದ್ರೆ ಈ ಭಾಗದ ಜನರು ತಮ್ಮ ಸಮುದಾಯದ ಸಂಪ್ರದಾಯ ಉಳುವಿಗಾಗಿ ದೇವರ ಎತ್ತುಗಳನ್ನು ಮೆರವಣಿಗೆ ಮಾಡಿ ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಭಿನ್ನವಾಗಿ ಜಾತ್ರೆ ಮಾಡ್ತಾರೆ.
ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬಂಗಾರದೇವರಹಟ್ಟಿ ಗ್ರಾಮ ಹಾಗೂ ಮೊಳಕಾಲ್ಮೂರು ಭಾಗದ ಮ್ಯಾಸ ಬೇಡರು ವರ್ಷಕ್ಕೆ ಒಂದು ಬಾರಿ ವಿಶೇಷವಾಗಿ ಆಚರಿಸುವ ಜಾತ್ರೆ ಇದಾಗಿದೆ. ಬಂಗಾರದೇವರ ಸನ್ನಿಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾರೆ. ಇತ್ತೀಚೆಗೆ ನಮ್ಮ ಮ್ಯಾಸ ಬೇಡರ ಸಂಪ್ರದಾಯ ನಶಿಸಿ ಹೋಗ್ತಿದೆ. ಅಂತದ್ರಲ್ಲಿ ನಮ್ಮ ಸಮುದಾಯದವರು ಕೆಲವು ಕಡೆ ಈ ರೀತಿಯ ಹಬ್ಬ ಆಚರಣೆಗಳನ್ನು ಮಾಡೋದ್ರಿಂದ ನಮ್ಮ ಮ್ಯಾಸ ನಾಯಕರ ಸಂಪ್ರದಾಯ ಉಳಿಯಲಿದೆ.
Chitradurga: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ನೀರು ಹಂಚಿಕೆ ವಿಚಾರದಲ್ಲಿ ಆಂಧ್ರ ಕ್ಯಾತೆ
ನಮ್ಮ ಭಾಗದಲ್ಲಿ ಹಲವು ದೇವರ ಕಟ್ಟೆಮನೆಗಳು ಎಂಬ ವಾಡಿಕೆಯಿದೆ. ಅದೇ ರೀತಿ ಈ ಜಾತ್ರೆ ನನ್ನಿವಾಳ ಕಟ್ಟೆಮನೆ ವ್ಯಾಪ್ತಿಗೆ ಬರುತ್ತದೆ. ಇತ್ತೀಚೆಗೆ ಜನರು ಈ ರೀತಿ ಜಾತ್ರೆ ಮಾಡೋದನ್ನು ನಿಲ್ಲಿಸಿದ್ದಾರೆ. ಹೀಗೆ ಜಾತ್ರೆಗಳನ್ನು ನಮ್ಮ ಸಮುದಾಯದಲ್ಲಿ ಮಾಡೋದ್ರಿಂದ ಆ ಗ್ರಾಮವಲ್ಲದೇ, ಸುತ್ತಮುತ್ತಲಿನ ಗ್ರಾಮಗಳ ಜನರು ಕ್ಷೇಮವಾಗಿ ಇರ್ತಾರೆ ಎಂಬ ನಂಬಿಕೆಯಿದೆ. ಅಕ್ಕಪಕ್ಕದ ಎಲ್ಲಾ ಗ್ರಾಮದ ಜನರು ಬಂದು ಇಲ್ಲಿ ವಾಸ್ತವ್ಯ ಹೂಡಿ ಜಾತ್ರೆ ಮಾಡ್ತಿದ್ದೇವೆ. ಇದ್ರಿಂದ ಎಲ್ಲರಿಗೂ ಆರೋಗ್ಯ, ನೆಮ್ಮದಿ ಕರುಣಿಸಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂಬುದು ನಮ್ಮೆಲ್ಲರ ಬಯಕೆ ಅಂತಾರೆ ಭಕ್ತರು.