Asianet Suvarna News Asianet Suvarna News

ಕಣ್ತುಂಬಿಕೊಳ್ಳಿ ಕನ್ನಿಕಾ ಪರಮೇಶ್ವರಿ ಸನ್ನಿಧಾನದಲ್ಲಿ ಮೈವೆತ್ತ ನಾಗಲೋಕವ..

ಮಲ್ಲೇಶ್ವರಂನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ 10ನೇ ಬ್ರಹ್ಮರಥೋತ್ಸವ ಅಂಗವಾಗಿ ನಾಗಲೋಕವನ್ನು ಸೃಷ್ಟಿಸಲಾಗಿದೆ. ಈ ಬಗ್ಗೆ ವಿವರ ನೋಡೋಣ ಬನ್ನಿ..

First Published Dec 21, 2022, 9:00 AM IST | Last Updated Dec 21, 2022, 9:00 AM IST

ಬೆಂಗಳೂರಿನ ಮಲ್ಲೇಶ್ವರಂನಲ್ಲೊಂದು ನಾಗಲೋಕ ಸೃಷ್ಟಿಯಾಗಿದೆ. ಕನ್ನಿಕಾಪರಮೇಶ್ವರಿಯ 10ನೇ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಈ ನಾಗಲೋಕವನ್ನ ಸೃಷ್ಟಿ ಮಾಡಲಾಗಿದೆ. ಬ್ರಹ್ಮರಥೋತ್ಸವಕ್ಕೆ ವಿಶೇಷವಾದ ಕಲಾ ಕೃತಿಗಳನ್ನು ರಚನೆ ಮಾಡುವಂತಹ ಪದ್ದತಿಯನ್ನು ದೇವಾಲಯದ ಆಡಳಿತ ಮಂಡಳಿ ನಡೆಸಿಕೊಂಡು ಬಂದಿದೆ. ದೇವಸ್ಥಾನದ ಮುಂಭಾಗದಿಂದಲೇ ಶುರುವಾಗುವ ಗುಹೆಯಂತಹ ಆಕೃತಿ ಭಕ್ತಾದಿಗಳನ್ನು ನಾಗ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನಾಗಲೋಕದ ಆಕೃತಿಗಳಿಗೆ ಮೆರಗು ನೀಡುವ ಲೈಟಿಂಗ್ಸ್ ಹಾಗೂ ಆಡಿಯೋ ಎಫೆಕ್ಟ್ ರೋಮಾಂಚಕಾರಿ ಅನುಭವ ನೀಡುತ್ತದೆ. 80 ದಿನಗಳ ಕಾಲ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಕಲಾಕೃತಿಗಳನ್ನು ರಚಿಸಿದ್ದಾರೆ. ಸರ್ಪ ಕಾಲದಲ್ಲಿ ನಾಗಕನ್ಯೆ ಶ್ರೀ ವಾಸವಿ ದೇವಿಯ ಕಥಾ ಚಿತ್ರ ಮಾಲಿಕೆಯನ್ನು ಪ್ರಸ್ತುತ ಪಡಿಸಲಾಗುತ್ತದೆ. ಡಿಸೆಂಬರ್ 16ರಂದು ಉದ್ಘಾಟನೆಗೊಂಡಿರುವ ಈ ವಿಶೇಷವಾದ ನಾಗಲೋಕ ಜನವರಿ 2ರವರೆಗೂ ಅನಾವರಣಗೊಳಲಿದೆ. ಈಗಾಗ್ಲೇ ಸಾಕಷ್ಟು ಭಕ್ತಾದಿಗಳು ಬಂದು ಈ ವಿಶೇಷ ಕಲಾಕೃತಿ ನೋಡಿ ಸಂತಸ ಪಡುತ್ತಿದ್ದಾರೆ.. ಈ ಮೂಲಕ ಇಂದಿನ ಪೀಳಿಗೆಗೆ ನಾಗಲೋಕದ ಪರಿಚಯ ಮಾಡಿಸೋದು ಹಾಗೂ  ಭಕ್ತದಿಗಳಿಗೆ ಹೊಸ ಚೈತನ್ಯ ನೀಡೋದು ಈ ಕಲಾಕೃತಿ ಉದ್ದೇಶ ಅನ್ನೋದಾಗಿ ಆರ್ಯವೈಶ್ಯ ಸಂಘಟನೆಯ ಕಾರ್ಯದರ್ಶಿ ರವಿಶಂಕರ್ ತಿಳಿಸಿದ್ದಾರೆ.

ಮುತ್ತನ್ನು ಧರಿಸಿದರೆ ಮಾನಸಿಕ ಶಾಂತಿಗಿಲ್ಲ ಕೊರತೆ

Video Top Stories