ಚಂದ್ರನಿಗೆ ಗಣಪತಿಯಿಂದ ಬಂದ ಶಾಪ ವಿಮೋಚನೆಯಾಗಿದ್ದು ಹೇಗೆ?

ಪುರಾಣದಲ್ಲಿ ಚಂದ್ರನಿಗೆ ಶಾಪ ಬಂದ ಕಥೆ ಹೀಗಿದೆ. ನಾರದ ಮಹರ್ಷಿ ಶಿವನ ಕೈಯಲ್ಲಿ ಒಂದು ಹಣ್ಣನ್ನು ಇಟ್ಟು ಹೊರಟು ಹೋಗುತ್ತಾರೆ. ಆಗ ಶಿವನು ಈ ಹಣ್ಣನ್ನು ಷಣ್ಮುಖನಿಗೆ ಕೊಡುತ್ತಾರೆ. ಆಗ ಗಣಪತಿಗೆ ಕೋಪ ಹೆಚ್ಚಾಗುತ್ತದೆ. ಅವನ ಕೋಪ ನೋಡಿ ಚಂದ್ರ ಜೋರಾಗಿ ನಕ್ಕು ಬಿಟ್ಟನಂತೆ. ಆಗ ಗಣಪತಿ, ನಿನ್ನನ್ನು ಯಾರು ನೋಡ್ತಾರೋ ಅವರಿಗೆ ದೋಷ ಉಂಟಾಗಲಿ; ಎಂದು ಶಾಪ ಕೊಡುತ್ತಾನೆ. 
 
First Published Sep 19, 2020, 5:48 PM IST | Last Updated Sep 21, 2020, 1:03 PM IST

ಪುರಾಣದಲ್ಲಿ ಚಂದ್ರನಿಗೆ ಶಾಪ ಬಂದ ಕಥೆ ಹೀಗಿದೆ. ನಾರದ ಮಹರ್ಷಿ ಶಿವನ ಕೈಯಲ್ಲಿ ಒಂದು ಹಣ್ಣನ್ನು ಇಟ್ಟು ಹೊರಟು ಹೋಗುತ್ತಾರೆ. ಆಗ ಶಿವನು ಈ ಹಣ್ಣನ್ನು ಷಣ್ಮುಖನಿಗೆ ಕೊಡುತ್ತಾರೆ. ಆಗ ಗಣಪತಿಗೆ ಕೋಪ ಹೆಚ್ಚಾಗುತ್ತದೆ. ಅವನ ಕೋಪ ನೋಡಿ ಚಂದ್ರ ಜೋರಾಗಿ ನಕ್ಕು ಬಿಟ್ಟನಂತೆ. ಆಗ ಗಣಪತಿ, ನಿನ್ನನ್ನು ಯಾರು ನೋಡ್ತಾರೋ ಅವರಿಗೆ ದೋಷ ಉಂಟಾಗಲಿ; ಎಂದು ಶಾಪ ಕೊಡುತ್ತಾನೆ. 

ದೇವತೆಗಳೆಲ್ಲಾ ಗಾಬರಿಯಾಗಿ ಚಂದ್ರನನ್ನು ನೋಡದೇ ಇರಲು ಹೇಗೆ ಸಾಧ್ಯ? ಏನಾದರೂ ಮಾಡು ಎಂದು ಕೇಳಿಕೊಳ್ಳುತ್ತಾರೆ. ಆಗ ಭಾದ್ರಪದ ಚತುರ್ಥಿ ದಿನ ಚಂದ್ರನನ್ನು ನೋಡಬಾರದು ಅಂತ ಶಾಪವನ್ನು ಕಡಿಮೆ ಮಾಡುತ್ತಾನೆ. ಆಗ ಚಂದ್ರ 120 ವರ್ಷಗಳ ಕಾಲ ಗಣಪತಿ ಏಕಾಕ್ಷರಿ ಮಂತ್ರದ ಜಪ ಮಾಡುತ್ತಾನೆ. ಪ್ರಸನ್ನನಾದ ಗಣಪತಿ ಅವನನ್ನು ಅನುಗ್ರಹಿಸುತ್ತಾನೆ. ಹೀಗೆ ಚಂದ್ರನಿಗೆ ಬಂದ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರವಾಗಿ ಹೇಳುತ್ತಾರೆ. ಕೇಳೋಣ ಬನ್ನಿ..!

Video Top Stories