Asianet Suvarna News Asianet Suvarna News

ಉಜ್ಜಯಿನಿಯಲ್ಲಿ ಅಡಗಿದೆ ಮಹಾಕಾಲನ ರಹಸ್ಯ

ಉಜ್ಜಯಿನಿಯಲ್ಲಿ ಪ್ರಳಯಕಾಲದ ಮಹಾ ರಹಸ್ಯ ಅಡಗಿದ್ದು, ಬೇರೆ ಜ್ಯೋತಿರ್ಲಿಂಗಗಳು ಪೂರ್ವ ದಿಕ್ಕನ್ನು ನೋಡುತ್ತಿದ್ದರೆ, ಈ ಮಹಾಕಾಲ ಮಾತ್ರ ದಕ್ಷಿಣಾಭಿಮುಖಿವಾಗಿ ದರ್ಶನ ನೀಡುತ್ತಿದ್ದಾನೆ. ಇಷ್ಟಕ್ಕು ಕಾಲಾತೀತ ಶಿವನ ಭಯಾನಕ ಸತ್ಯವೇನು..? ಇಲ್ಲಿದೆ ಡಿಟೇಲ್ಸ್.

First Published Oct 13, 2022, 12:38 PM IST | Last Updated Oct 13, 2022, 12:38 PM IST

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲ ಪ್ರಾಂಗಣ ಅಭಿವೃದ್ಧಿಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 'ಮಹಾಕಾಲ ಲೋಕ' ಕಾರಿಡಾರ್‌ ಲೋಕಾರ್ಪಣೆ ಮಾಡಿದ್ದಾರೆ. ಇನ್ನು ಶಿವನ ಸಾಂಗತ್ಯದಲ್ಲಿ ಎಲ್ಲವೂ ಅಸಾಮಾನ್ಯ . ಉಜ್ಜಯಿನಿ ಕ್ಷೇತ್ರವು ಕೇವಲ ಭೌಗೋಳಿಕ ಕೇಂದ್ರ ಸ್ಥಾನ ಮಾತ್ರವಲ್ಲ, ಆಧ್ಯಾತ್ಮಿಕದ ಆತ್ಮವಾಗಿದೆ. ಉಜ್ಜಯಿನಿಯ ಮಹಾಕಾಲೇಶ್ವರ ಭೂಲೋಕವನ್ನು ಕಾಪಾಡಲು ನೆಲೆಸಿದ್ದು, ಸ್ವಯಂ ಭೂ ಲಿಂಗ ಎಂಬ ನಂಬಿಕೆ ಇದೆ. ಅದಲ್ಲದೆ ಬ್ರಹ್ಮದೇವನನೇ ಈ ದೇವಾಲಯವನ್ನು ಕಟ್ಟಿದ್ದಾನೆ ಎಂದು ಪುರಾಣ ಹೇಳುತ್ತದೆ. ಹಾಗೆ ಈ ಊರಿಗೆ ಕೇವಲ ಇತಿಹಾಸವಲ್ಲ, ದೊಡ್ಡ ಚರಿತ್ರೆಯಿದ್ದು, ರಾಜಾಧಿರಾಜ ಮಹಾಕಾಲ ರಹಸ್ಯವನ್ನು ಒಳಗೊಂಡಿದೆ.

ಮಹಾಕಾಲ ಕಾರಿಡಾರ್: ಮೊದಲ ಬಾರಿ ಮಂಗಳವಾರ ಉದ್ಘಾಟನೆ ಮಾಡಿದ ಮೋದಿ