Asianet Suvarna News Asianet Suvarna News

Charlie Release date: ಈ ವರ್ಷ 'ಚಾರ್ಲಿ' ಬಿಡುಗಡೆ ಆಗುತ್ತಾ..?

ಸ್ಯಾಂಡಲ್‌ವುಡ್ ಸಿಂಪಲ್ ಪ್ರತಿಭೆ (Sandalwood Simple Star) ರಕ್ಷಿತ್ ಶೆಟ್ಟಿ (Rakshith Shetty) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 11 ವರ್ಷಗಳು ಪೂರೈಸಿವೆ. 

ಬೆಂಗಳೂರು (ನ. 29): ಸ್ಯಾಂಡಲ್‌ವುಡ್ ಸಿಂಪಲ್ ಪ್ರತಿಭೆ (Sandalwood Simple Star) ರಕ್ಷಿತ್ ಶೆಟ್ಟಿ (Rakshith Shetty) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 11 ವರ್ಷಗಳು ಪೂರೈಸಿವೆ.  ‘ನಮ್‌ ಏರಿಯಾಲ್‌ ಒಂದಿನ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಕ್ಷಿತ್‌, ಈವರೆಗೆ ಹಲವು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ.

Madhagaja Release Date: ಹುಲಿನಾ ಬೇಟೆ ಆಡಬೇಕು, ನರಿನಲ್ಲ ಎನ್ನುತ್ತಲೇ ತೆರೆ ಮೇಲೆ ಮದಗಜ

ಇಷ್ಟು ವರ್ಷಗಳಲ್ಲಿ ಅನೇಕ ಸಿನಿಮಾಗಳನ್ನು ಮಾಡಿರುವ ರಕ್ಷಿತ್ ಶೆಟ್ಟಿಯ ಮತ್ತೊಂದು ಭರವಸೆ ಹುಟ್ಟಿಸಿರುವ ಸಿನಿಮಾ ಚಾರ್ಲಿ. ಚಾರ್ಲಿ ಮತ್ತು ಧರ್ಮ ಪಾತ್ರಗಳ ಮಧ್ಯದ ತಿಕ್ಕಾಟಗಳ ಕಥೆ ಇರುವ ಈ ಸಿನಿಮಾ ಎರಡು ಕಾರಣಕ್ಕೆ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿವೆ. ಒಂದು ರಕ್ಷಿತ್ ಶೆಟ್ಟಿ ಅವರ ಸಿನಿಮಾ ಎಂಬ ಕಾರಣಕ್ಕೆ. ಮತ್ತೊಂದು ಟೀಸರ್‌ನಲ್ಲಿ ತೋರಿಸುವ ಶ್ವಾನ ಎಲ್ಲರನ್ನು ಆಗರ್ಷಿಸಿರುವ ಕಾರಣಕ್ಕೆ. ಪ್ರಾಣಿಯೊಂದನ್ನೇ ಹೀರೋ ಆಗಿ ಚಿತ್ರಿಸಿರುವ ಈ ಚಿತ್ರ ಬಹು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡಗಡೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಹೊಸ ಅಪ್‌ಡೇಟ್ ಇಲ್ಲಿದೆ. ಏನದು ನೋಡಿ.

Video Top Stories