Asianet Suvarna News

12ನೇ ಕ್ಲಾಸ್ ಪರೀಕ್ಷೆ ನಡೆಯುತ್ತಾ? ರದ್ದಾಗುತ್ತಾ? ಎಲ್ಲರ ಚಿತ್ತ ಮೋದಿಯತ್ತ

Jun 1, 2021, 5:59 PM IST

ನವದೆಹಲಿ, (ಜೂನ್.01) : ಕೊರೋನಾ ಸೋಂಕಿನ ಆರ್ಭಟದಿಂದಾಗಿ ಈಗಾಗಲೇ ಅನೇಕ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲಾಗಿದೆ. ಇದರ ಮಧ್ಯೆ CBSE ಹಾಗೂ ಐಸಿಎಸ್‌ಇ 12ನೇ ತರಗತಿ ಪರೀಕ್ಷೆ ನಡೆಸುವ ಕುರಿತಂತೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. 

ಶೈಕ್ಷಣಿಕ ವೇಳಾಪಟ್ಟಿ ಬದಲು, ಶಾಲೆ ಆರಂಭದ ದಿನಾಂಕ ಘೋಷಿಸಿದ ಇಲಾಖೆ .

ಇದರಿಂದಾಗಿ ಈ ಸಂಬಂಧ ಇಂದು (ಮಂಗಳವಾರ) ಸಂಜೆ ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ 12ನೇ ತರಗತಿ ಪರೀಕ್ಷೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಮೋದಿ ಮೀಟಂಗ್ ನತ್ತೆ ನಟ್ಟಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಮಹತ್ವದ ಮಾಹಿತಿ ಹೊರಬೀಳಲಿದೆ.