ಈ ತರಗತಿಗಳನ್ನು ಬಿಟ್ಟು, ಉಳಿದ ತರಗತಿಗಳು ಬಂದ್ ಆಗುತ್ತಾ..? ಏನ್ ಹೇಳ್ತಾರೆ ಸುಧಾಕರ್.?

ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ರೆ, ಹತೋಟಿಗೆ ತರುವುದು ಕಷ್ಟ ಎನ್ನಲಾಗುತ್ತಿದೆ. ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. 

First Published Mar 22, 2021, 11:53 AM IST | Last Updated Mar 22, 2021, 12:07 PM IST

ಬೆಂಗಳೂರು (ಮಾ. 22): ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ರೆ, ಹತೋಟಿಗೆ ತರುವುದು ಕಷ್ಟ ಎನ್ನಲಾಗುತ್ತಿದೆ. ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಹಲವು ಟಫ್ ರೂಲ್ಸ್ ಆಗಬೇಕು. 10 ಹಾಗೂ 12 ನೇ ತರಗತಿ ಬಿಟ್ಟು ಉಳಿದ ತರಗತಿಗಳನ್ನು 3 ವಾರ ಬಂದ್ ಮಾಡಿ, ಅಪಾರ್ಟ್‌ಮೆಂಟ್ ಪಾರ್ಟಿ ಹಾಲ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಿ, ಥಿಯೇಟರ್‌ಗಳಲ್ಲಿ ಶೇ. 50 ರಷ್ಟು ಸೀಟು ಭರ್ತಿಗೆ ಅವಕಾಶ ಕೊಡಿ ಸೇರಿದಂತೆ ಕೆಲವು ಶಿಫಾರಸ್ಸುಗಳನ್ನು ಮಾಡಿದೆ. 

ಕೊರೊನಾ 2 ನೇ ಅಲೆ; ಮಕ್ಕಳು, ಯುವಕರಿಗೆ ಬೇಗ ಅಟ್ಯಾಕ್, ಇರಲಿ ಎಚ್ಚರ