ಎ ಬ್ರೀಫ್ ಹಿಸ್ಟರಿ ಆಫ್ ಸೈನ್ಸ್ ಇನ್ ಇಂಡಿಯಾ ಪುಸ್ತಕ ಬಿಡುಗಡೆ

 

  • ಜೆಎನ್‌ಯು ಸಂಶೋಧಕ ಪಿ.ಎ. ಶಬರೀಶ್ ಬರೆದಿರುವ ಪುಸ್ತಕ
  • ಪುಸ್ತಕ ಬಿಡುಗಡೆ ಮಾಡಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಮಾತು
  • ಭಾರತದಲ್ಲಿ ವಿಜ್ಞಾನದ ವಿಕಸನ, ವೃತ್ತಾಂತ ವಿಚಾರಗಳ ಪ್ರತಿಪಾದನೆ
  • ವೇದಗಳ ಪೂರ್ವ ಕಾಲದಿಂದ ಹಿಡಿದು ಆಧುನಿಕ ಕಾಲದ ತನಕ ವಿಚಾರಗಳು
First Published Mar 22, 2022, 9:10 PM IST | Last Updated Mar 22, 2022, 9:20 PM IST

ನವದೆಹಲಿ(ಮಾ.22): ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ (Jawaharlal Nehru University ) ಸಂಶೋಧಕ ಪಿ.ಎ. ಶಬರೀಶ್ (Sabareesh)` ಎ ಬ್ರೀಫ್ ಹಿಸ್ಟರಿ ಆಫ್ ಸೈನ್ಸ್ ಇನ್ ಇಂಡಿಯಾ' ಅವರ ಪುಸ್ತಕವನ್ನು ಜೆಎನ್‌ಯು ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ (JitendraSingh) ಬಿಡುಗಡೆ ಮಾಡಿದರು. ಭಾರತದಲ್ಲಿ ವಿಜ್ಞಾನದ ವಿಕಸನ, ವೃತ್ತಾಂತ  ವಿಚಾರಗಳು ಪುಸ್ತಕದಲ್ಲಿ ಪ್ರತಿಪಾದನೆ ಮಾಡಲಾಗಿದೆ. ಭಾರತದ ವೈಜ್ಞಾನಿಕ ಇತಿಹಾಸವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

Belgaum Files ಟ್ವೀಟ್ ಮಾಡಿ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕಿದ ಶಿವಸೇನೆಯ ಸಂಜಯ್ ರಾವತ್

ಭಾರತೀಯರಿಗೆ ಜನ್ಮತಃ ವಿಜ್ಞಾನ ಬಂದಿರುತ್ತೆ. ವಿಜ್ಞಾನ ಓದದ ಅನಕ್ಷಕರಸ್ಥ ಕೂಡ ಸಮುದ್ರ ದಂಡೆಯ ಮೇಲಿನ ಗಾಳಿ ದಿಕ್ಕನ್ನು ಅನುಸರಿ ಯಾವಾಗ ತುಫಾನು ಬರಲಿದೆ ಅಂಥ ಹೇಳುತ್ತಾನೆ. ಸಾಮಾನ್ಯಕ್ಕೆ ಮನುಷ್ಯ ಕಾಣದ್ದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಲೇ ಇರುತ್ತಾನೆ. ಕಂಡು ಹಿಡಿದಿದ್ದು ವಿಜ್ಞಾನದ ಭಾಗವಾಗುತ್ತೆ, ಅನ್ವೇಷಿಸಲಾಗದ್ದು ಧರ್ಮದ ಭಾಗವಾಗಿ ಉಳಿದುಬಿಡುತ್ತದೆ. ಇದು ಕೂಡ ಮಾನವನಿಗೆ ಶಿಸ್ತನ್ನು ಕಲಿಸುತ್ತದೆ. ಇನ್ನು ಆಳದ ಅಧ್ಯಯನಕ್ಕೆ ಹೋದಂತೆಲ್ಲಾ ವಿಜ್ಞಾನಕ್ಕೆ, ಇತಿಹಾಸಕ್ಕೆ ಹಾಗು ಮಾನವನ ಅಸ್ಥಿತ್ವಕ್ಕೆ ಅಂತಿಮ ಗೆರೆ ಸಾಮಾನ್ಯವಾಗಿರುತ್ತೆ ಎನ್ನುವ ಅಂಶಗಳು ಈ ಪುಸ್ತಕದಲ್ಲಿ ಅಡಕವಾಗಿದೆ ಎಂದು ವಿವರಿಸಿದರು.

Video Top Stories