Panchanga: ಇಂದು ವಿಶಾಖ ನಕ್ಷತ್ರ, ಸುಬ್ರಮಣ್ಯನ ಆರಾಧನೆ ಮಾಡಿ...
ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ವಿಶಾಖ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಂದು ಸಂಕಷ್ಟ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದೆ. ಇಂದು ವಿಶಾಖ ನಕ್ಷತ್ರ ಇರುವುದರಿಂದ ಸುಬ್ರಮಣ್ಯನ ಆರಾಧನೆಗೆ ಬಹಳ ಪ್ರಶಸ್ತವಾದ ದಿನ. ವಿಶಾಖ ನಕ್ಷತ್ರದಲ್ಲಿ ಹುಟ್ಟಿದರೆ ನಕ್ಷತ್ರ ಜನನ ಶಾಂತಿಯನ್ನು ಹೇಳಲಾಗುತ್ತದೆ, ಸ್ವಲ್ಪ ಮಟ್ಟಿಗೆ ಇದು ಗ್ರಾಹ್ಯವಲ್ಲದ ನಕ್ಷತ್ರವಾಗಿದೆ. ನಕ್ಷತ್ರ ತುಂಬಾ ಪ್ರದಾನವಾಗಿದ್ದು ನಮ್ಮ ಜಿವನದಲ್ಲಿ ನಕ್ಷತ್ರದಿಂದಲೆ ನಾವು ಗುರುತಿಸಿಕೊಳ್ಲುವುದು ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ.