Panchanga: ಇಂದು ಪಂಚಮಿ ತಿಥಿ, ಸುಬ್ರಮಣ್ಯನ ಆರಾಧನೆ ಮಾಡಿ...
ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಜ್ಯೇಷ್ಠ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಂದು ಮಂಗಳವಾರ ಮತ್ತು ಪಂಚಮಿ ತಿಥಿ ಇದೆ ಹಾಗಾಗಿ ನಾಗಾರಾಧನೆ ಮಾಡಲಾಗುತ್ತದೆ.ಪಂಚಮಿ ತಿಥಿ ಯಲ್ಲಿ ನಾಗಗಳಿಗೆ ಹಾಲಿನ ಅಭಿಷೇಕ ಮಾಡುತ್ತಾರೆ. ಹಾಗೇ ಉಪ್ಪು ಇಲ್ಲದ ಪದಾರ್ಥಗಳನ್ನು ನೈವೇದ್ಯ ಮಾಡಬೇಕು. ಅದಲ್ಲದೆ ಸುಬ್ರಮಣ್ಯನ ಆರಾಧನೆಯನ್ನು ಮಾಡಿದರೆ ಇಂದು ಒಳ್ಳೆಯದು . ಇನ್ನು ನಾಗನಿಗೆ ಇಂದು ಎಳನೀರು ಅಭಿಷೇಕ ಮಾಡಿದರೆ ವಿಶಿಷ್ಟ ಫಲ ತಂದುಕೊಡುತ್ತದೆ ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ.