ಸುವರ್ಣ ನ್ಯೂಸ್ ವರದಿ ಪ್ರಸಾರವಾಗುತ್ತಿದ್ದಂತೆ ಗಾಂಜಾ ಡಾನ್ ಅರೆಸ್ಟ್!
ಯಾವುದಾದರೂ ಸುದ್ದಿ ತೆಗೆದುಕೊಂಡರೆ ಅದಕ್ಕೊಂದು ಅಂತ್ಯ ಹಾಡುವವರೆಗೆ ಸುವರ್ಣ ನ್ಯೂಸ್ ಬಿಡುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ.
ಬೆಂಗಳೂರು (ಸೆ. 20): ಯಾವುದಾದರೂ ಸುದ್ದಿ ತೆಗೆದುಕೊಂಡರೆ ಅದಕ್ಕೊಂದು ಅಂತ್ಯ ಹಾಡುವವರೆಗೆ ಸುವರ್ಣ ನ್ಯೂಸ್ ಬಿಡುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. ಗಾಂಜಾ ಗ್ಯಾಂಗ್ ಬಗ್ಗೆ ಸುವರ್ಣ ನ್ಯೂಸ್ ಆಪರೇಶನ್ ನಡೆಸಿ ಹೇಗೆಲ್ಲಾ ಗಾಂಜಾ ವ್ಯಾಪಾರ ಆಗುತ್ತಿದೆ ಎಂಬುದನ್ನು ಪ್ರಸಾರ ಮಾಡುತ್ತಿದ್ದಂತೆ ಗಾಂಜಾ ಡಾನ್ ಬಾಬು ಅಂದರ್ ಆಗಿದ್ದಾರೆ.
ಸುವರ್ಣ ನ್ಯೂಸ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಗಾಂಜಾ ಡಾನ್; ಎಕ್ಸ್‌ಕ್ಲೂಸಿವ್ ಅಂದ್ರೆ ಇದು!
ವರದಿ ಪ್ರಸಾರವಾಗುತ್ತಿದ್ದಂತೆ ಗಾಂಜಾ ಬಾಬು ಮನೆ ಮೇಲೆ ದಾಳಿ ಮಾಡಿ, 2 ಕೆಜಿಗೂ ಅಧಿಕ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಬು ಜೊತೆ ಇನ್ನೂ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದು ಸುವರ್ಣ ನ್ಯೂಸ್ ವರದಿಯ ಫಲಶೃತಿ!