Asianet Suvarna News Asianet Suvarna News

ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಹತ್ಯೆ: ಪತಿರಾಯನ ಕಥೆ ಕೇಳಿದ ಪೊಲೀಸರಿಗೆ ಶಾಕ್..!

Oct 16, 2021, 4:02 PM IST

ಬೆಂಗಳೂರು, (ಅ.16): ಸಂಸಾರದಲ್ಲಿ ಪ್ರೀತಿ ಕಲಹ ಸರ್ವೇ ಸಾಮಾನ್ಯ ಕಣ್ರೀ. ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಅಂತ ದೊಡ್ಡವರು ಸುಮ್ನೆ ಹೇಳಿಲ್ಲ ಬಿಡಿ. ಆದರೆ ಫೈನಾಶ್ಸಿಯರ್ ಆಗಿರುವ ಕಾಂತರಾಜ್‍ಗೆ ತನ್ನ ಹೆಂಡತಿ ರೂಪಾ ನಡತೆಯ ಮೇಲೆ ಅನುಮಾನವಿತ್ತಂತೆ… ಪತ್ನಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಕಾಂತರಾಜ್ ಹೆವ್ವಿ ಡೌಟ್ ಪಡ್ತಿದ್ನಂತೆ. ಇದರಿಂದ ತೀವ್ರ ಖಿನ್ನೆತೆಗೆ ಒಳಗಾಗಿದ್ದ ಪತಿರಾಯ ಡೀಲ್ ಗೆ ಸಿದ್ಧನಾಗ್ತಾನೆ, ವಿವಿಧ ರೀತಿಯಲ್ಲಿ ಸ್ಕೇಚ್ ಗೆ ಪ್ಲ್ಯಾನ್ ಮಾಡಿ ಕೊನೆಗೈ ಪತ್ನಿಯನ್ನು ಮುಗಿಸಿದ್ದಾನೆ.

ತಾಯಿ, ತಂಗಿಯನ್ನೆ ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ

ಕಾಂತರಾಜ್ ಪತ್ನಿಯನ್ನು ಮುಗಿಸಲು ಪಕ್ಕಾ ಸಿನಿಮಾ ಸ್ಟೈಲ್‍ನಲ್ಲಿ ಸಿದ್ಧನಾಗಿದ್ದ. ಸಿನೆಮಾ ರೀತಿಯಲ್ಲೇ ಕೊಲೆಗೆ ಸ್ಕೆಚ್ ನಡೆದಿತ್ತು. ಹೆಂಡತಿಯ ಕೊಲೆಗೆ ಮನೆಯಲ್ಲೇ ಸ್ಕೆಚ್ ರೆಡಿಯಾಗಿತ್ತು ಅಂತ ವಿಚಾರಣೆ ನಡೆಸಿದ ಪೊಲೀಸರಿಗೆ ಮಾಹಿತಿ ಬಹಿರಂಗ ಪಡೆಸಿದ್ದಾರೆ.