Asianet Suvarna News Asianet Suvarna News

HSR ಲೇಔಟ್‌ನಲ್ಲಿ ನಾಡಧ್ವಜ ಸುಟ್ಟ ಪ್ರಕರಣ: ಟೆಕ್ಕಿ ಅರೆಸ್ಟ್! ಕಾರಣ ಕೇಳಿ ಪೊಲೀಸ್ರು ಶಾಕ್‌!

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಾಡ ಧ್ವಜ ಸುಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ವಾರಣಾಸಿ ಮೂಲದ ಟೆಕ್ಕಿ ಅಮೃತೇಶ್‌ನನ್ನು ಬಂಧಿಸಲಾಗಿದೆ. ಪೊಲೀಸರ ಮೇಲಿನ ಕೋಪಕ್ಕೆ ಆರೋಪಿಯು ಕನ್ನಡ ಬಾವುಟ ಸುಟ್ಟಿದ್ದಾನೆ.

ಬೆಂಗಳೂರು (ಡಿ.07): ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಾಡ ಧ್ವಜ ಸುಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ವಾರಣಾಸಿ ಮೂಲದ ಟೆಕ್ಕಿ ಅಮೃತೇಶ್‌ನನ್ನು ಬಂಧಿಸಲಾಗಿದೆ. ಪೊಲೀಸರ ಮೇಲಿನ ಕೋಪಕ್ಕೆ ಆರೋಪಿಯು ಕನ್ನಡ ಬಾವುಟ ಸುಟ್ಟಿದ್ದಾನೆ. ಇದರ ಹಿಂದೆ ಲಾಕ್‌ಡೌನ್‌ ಕಹಾನಿ ಇದೆ. ಹೌದು! ಕೋರೋನಾ ಲಾಕ್‌ಡೌನ್ ಸಮಯದಲ್ಲಿ ಬೆಂಗಳೂರಿನಲ್ಲಿದ್ದ ಅಮೃತೇಶ್‌ಗೆ ಊರಿಗೆ ಹೋಗೋಕೆ ಪೊಲೀಸರು ಬಿಟ್ಟಿರಲಿಲ್ಲ. ಆ ಸಮಯದಲ್ಲಿ ಪೊಲೀಸರು ಅಮೃತೇಶ್‌ಗೆ ಹೊಡೆದು ಕಳುಹಿಸಿದ್ದರು. ಹೀಗಾಗಿ ಅಮೃತೇಶ್ ಕನ್ನಡ ಮತ್ತು ಕರ್ನಾಟಕದ ಬಗ್ಗೆ ದ್ವೇಷವನ್ನು ಬೆಳೆಸಿಕೊಂಡಿದ್ದ. ಎರಡೂವೆರೆ ವರ್ಷದ ಕನ್ನಡ ಬಾವುಟ ಸುಟ್ಟು ಹಾಕುವ ಮೂಲಕ ರಿವೇಂಜ್ ತೀರಿಸಿಕೊಂಡಿದ್ದಾನೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.