Asianet Suvarna News Asianet Suvarna News

ಮತ್ತೊಂದು ಬಾಂಬ್ ಸಿಡಿಸಿದ ಸಂಬರ್ಗಿ; ಈ ಬಾರಿ ಸಿನಿಮಾರಂಗದ ಗಣ್ಯರೇ ಗುರಿ!

  • ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಮತ್ತೊಂದು ಸ್ಫೋಟಕ ಹೇಳಿಕೆ
  • ಜೂಜಾಟದಲ್ಲಿ ಸಿನಿಮಾರಂಗದ 12 ಪ್ರಮುಖರು ಭಾಗಿ, ಐವರ ಹೆಸರು ಉಲ್ಲೇಖ
  • ದಿನಕ್ಕೊಂದು ತಿರುವು ಪಡೆಯುತ್ತಿರುವ ಡ್ರಗ್ಸ್ ಮಾಫಿಯಾ ಪ್ರಕರಣ
     

ಬೆಂಗಳೂರು (ಸೆ.13): ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಜೂಜಾಟದಲ್ಲಿ ಸಿನಿಮಾರಂಗದ 12 ಗಣ್ಯರು ಭಾಗಿಯಾಗಿದ್ದಾರೆ, ಐವರ ಹೆಸರನ್ನು ಸಿಸಿಬಿಗೆ ನೀಡಿದ್ದೇನೆ ಎಂದಿದ್ದಾರೆ ಸಂಬರ್ಗಿ.

ಇದನ್ನೂ ನೋಡಿ | ಶೇಕ್ ಫಾಝಿಲ್ ನಂಟು: ಚಂದನವನದ ಮತ್ತೋರ್ವ ನಟಿಗೆ ಸಿಸಿಬಿ ನೋಟಿಸ್ ಕೊಡುತ್ತಾ..?

ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿಯೆಬ್ಬಿಸಿರುವ ಡ್ರಗ್ಸ್ ಮಾಫಿಯಾ ಪ್ರಕರಣ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಇಬ್ಬರು ಟಾಪ್ ನಟಿಯರು ಸಿಸಿಬಿ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ.