ಮೈಸೂರು; ಕ್ಷುಲ್ಲಕ ಕಾರಣಕ್ಕೆ ಸೊಸೆಯನ್ನು ಚಾಕುವಿನಿಂದ ಚುಚ್ಚಿ ಭಯದಿಂದ ಅತ್ತೆ ಸುಸೈಡ್

* ಸೊಸೆಯನ್ನು ಚಾಕುವಿನಿಂದ ಚುಚ್ಚಿ ಅತ್ತೆ ಸುಸೈಡ್
* ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ
* ಸೊಸೆಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅತ್ತೆ ಆತ್ಮಹತ್ಯೆ
* ತಾಳ್ಮೆ ಕಳೆದುಕೊಂಡ ನಿವೃತ್ತ ಶಿಕ್ಷಕಿ 

First Published Sep 29, 2021, 5:34 PM IST | Last Updated Sep 29, 2021, 5:34 PM IST

ಮೈಸೂರು(ಸೆ. 29)  ಸೊಸೆಯನ್ನು ಚಾಕುವಿನಿಂದ ಚುಚ್ಚಿದ ಅತ್ತೆ ಆತ್ಮಹತ್ಯೆಗೆ (suicide) ಶರಣಾಗಿದ್ದಾಳೆ. ನಿವೃತ್ತ ಶಿಕ್ಷಕಿ ಅತ್ತೆ ಸೊಸೆಯ ಮೇಲೆ ದಾಳಿ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳವಾಗಿದ್ದ ಪ್ರಕರಣ ಮೈಸೂರಿನಿಂದ(Mysuru) ವರದಿಯಾಗಿದೆ.

ಮೋಕ್ಷ ಸಿಗುತ್ತದೆ ಎಂದು ನಂಬಿ ದೇವಾಲಯದ ಆವರಣದಲ್ಲೇ ಆತ್ಮಹತ್ಯೆ

ಜಗಳ ತಾರಕಕ್ಕೆ ಏರಿದ ನಂತರ ಸೊಸೆಯನ್ನು ಚುಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಾಯಗೊಂಡ ಸೊಸೆಯನ್ನು ಆಸ್ಪತ್ರೆಗೆ  ಮಗ ದಾಖಲಿಸಲಾಗಿದೆ. ಈ ವೇಳೆ ಆತಂಕಕ್ಕೆ ಒಳಗಾದ ಅತ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕ್ಷುಲ್ಲಕ ಕಾರಣದಲ್ಲಿ ಒಬ್ಬರ ಜೀವ ಹೋಗಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ.