Asianet Suvarna News Asianet Suvarna News
breaking news image

ಡ್ರಗ್ ಡೀಲ್‌ನಲ್ಲಿ CCB ಬಳಿ ಸೆಲಬ್ರಿಟಿಗಳ ಮತ್ತೊಂದು ಲಿಸ್ಟ್ ರೆಡಿ; ವಿಚಾರಣೆಗೆ ತಯಾರಾಗಿ!

ಸ್ಯಾಂಡಲ್‌ವುಡ್ ಡ್ರಗ್ ಜಾಲದ ನಂಟು ಹನುಮಂತನ ಬಾಲದ ಹಾಗೆ ಉದ್ದುದ್ದ ಬೆಳೆಯುತ್ತಲೇ ಇದೆ. ವಿಚಾರಣೆ ಮಾಡಿದಷ್ಟು ಹೊರ ಬರುತ್ತಿದೆ. ಇಂದು ಅಕುಲ್ ಬಾಲಾಜಿ, ಸಂತೋಷ್ ಹಾಗೂ ಯುವರಾಜ್‌ರನ್ನು ವಿಚಾರಣೆ ನಡೆಸಲಾಯಿತು. ಇವರ ಜೊತೆ ಇನ್ನಷ್ಟು ಸೆಲಬ್ರಿಟಿಗಳ ಲಿಸ್ಟ್ ರೆಡಿ ಮಾಡಿದೆ ಸಿಸಿಬಿ. 

ಬೆಂಗಳೂರು (ಸೆ. 19): ಸ್ಯಾಂಡಲ್‌ವುಡ್ ಡ್ರಗ್ ಜಾಲದ ನಂಟು ಹನುಮಂತನ ಬಾಲದ ಹಾಗೆ ಉದ್ದುದ್ದ ಬೆಳೆಯುತ್ತಲೇ ಇದೆ. ವಿಚಾರಣೆ ಮಾಡಿದಷ್ಟು ಹೊರ ಬರುತ್ತಿದೆ. ಇಂದು ಅಕುಲ್ ಬಾಲಾಜಿ, ಸಂತೋಷ್ ಹಾಗೂ ಯುವರಾಜ್‌ರನ್ನು ವಿಚಾರಣೆ ನಡೆಸಲಾಯಿತು. ಇವರ ಜೊತೆ ಇನ್ನಷ್ಟು ಸೆಲಬ್ರಿಟಿಗಳ ಲಿಸ್ಟ್ ರೆಡಿ ಮಾಡಿದೆ ಸಿಸಿಬಿ. 

ಸಂಜನಾ ಮುಸ್ಲಿಂ ಧರ್ಮಕ್ಕೆ; ಮತಾಂತರದ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಸಿಸಿಬಿ ಹೊಸ ಲಿಸ್ಟ್‌ನಲ್ಲಿ ನಟಿಯರು, ಹಾಗೂ ಉದ್ಯಮಿಗಳಿದ್ದಾರೆ. ಇವರ ಚಲನವಲನಗಳನ್ನು ಸಿಸಿಬಿ ಗಮನಿಸುತ್ತಿದೆ. ಒಬ್ಬೊಬ್ಬರನ್ನೇ ಡ್ರಿಲ್ ಮಾಡಲು ತಯಾರಿ ಕೂಡಾ ನಡೆಯುತ್ತಿದೆ. ಈಗಾಗಲೇ ರಾಗಿಣಿ, ಸಂಜನಾ, ದಿಗಂತ್, ಐಂದ್ರಿತಾ ರೈ, ಅಕುಲ್, ಸಂತೋಷ್, ಯುವರಾಜ್‌ರನ್ನು ವಿಚಾರಣೆ ನಡೆಸಲಾಗಿದೆ. ಇವರು ಬರೀ ಟ್ರೇಲರ್ ಅಷ್ಟೇ. ಪಿಕ್ಚರ್ ಅಭಿ ಬಾಕಿ ಹೈ ಅಂತಿದೆ ಸಿಸಿಬಿ. ಅಂದರೆ ಇನ್ನಷ್ಟು ಸಿನಿಮಾ ಸೆಲಬ್ರಿಟಿಗಳು ಡ್ರಗ್ ಡೀಲ್‌ನಲ್ಲಿ ಹೊರಬರುವ ಸಾಧ್ಯತೆ ಇದೆ. 

Video Top Stories