ಮದನಾರಿಯರ ವಾಟ್ಸಾಪ್ ರಹಸ್ಯ; ಹೊರ ಬಂದರೆ ಇನ್ನಷ್ಟು ಮಂದಿಗೆ ಸಿಸಿಬಿ ಉರುಳು?

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಬೆನ್ನತ್ತಿರುವ ಸಿಸಿಬಿಗೆ ವಿಚಾರಣೆ ನಡೆಸಿದಷ್ಟು ಹೊಸ ಹೊಸ ವಿಚಾರಗಳು ತೆರೆದುಕೊಳ್ಳುತ್ತಿವೆ. ಈಗಾಗಲೇ ನಟಿ ಮಣಿಯರಾದ ಸಂಜನಾ, ರಾಗಿಣಿ ವಿಚಾರಣೆಯಲ್ಲಿದ್ದಾರೆ. ಇವರಿಬ್ಬರು ವಿಚಾರಣೆಯ ಸೆಂಟರ್‌ ಆಫ್ ಅಟ್ರಾಕ್ಷನ್! 

First Published Sep 10, 2020, 6:10 PM IST | Last Updated Sep 10, 2020, 6:10 PM IST

ಬೆಂಗಳೂರು (ಸೆ. 10): ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಬೆನ್ನತ್ತಿರುವ ಸಿಸಿಬಿಗೆ ವಿಚಾರಣೆ ನಡೆಸಿದಷ್ಟು ಹೊಸ ಹೊಸ ವಿಚಾರಗಳು ತೆರೆದುಕೊಳ್ಳುತ್ತಿವೆ. ಈಗಾಗಲೇ ನಟಿ ಮಣಿಯರಾದ ಸಂಜನಾ, ರಾಗಿಣಿ ವಿಚಾರಣೆಯಲ್ಲಿದ್ದಾರೆ. ಇವರಿಬ್ಬರು ವಿಚಾರಣೆಯ ಸೆಂಟರ್‌ ಆಫ್ ಅಟ್ರಾಕ್ಷನ್! 

ರಕ್ತದ ಮಾದರಿ ತೆಗೆದುಕೊಳ್ಳಲು ಸಂಜನಾ ರಂಪಾಟ; ಇದರ ಹಿಂದೆ ಯಾರಿರಬಹುದು?

ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಪೆಡ್ಲರ್‌ಗಳ ಜೊತೆ ನಡೆಸಿದ ಚಾಟ್‌ಗಳು ಸಿಸಿಬಿಗೆ ಲಭ್ಯವಾಗಿದೆ. ಸಿಸಿಬಿ ಅವರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಭಯದಿಂದ ವಾಟ್ಸಾಪ್ ಚಾಟ್‌ಗಳನ್ನು ಅಳಿಸಿ ಹಾಕಿದ್ದರು. ಆದರೆ ಸಿಸಿಬಿ ಅಧಿಕಾರಿಗಳು ಅದನ್ನು ರಿಟ್ರೀವ್ ಮಾಡಿದ್ದಾರೆ. ಆ ಚಾಟ್‌ಗಳನ್ನು ನೋಡುತ್ತಾ ಹೋದರೆ ಹೊಸ ಹೊಸ ಕನೆಕ್ಷನ್‌ಗಳು ಸುತ್ತಿಕೊಳ್ಳುತ್ತಾ ಹೋಗುತ್ತಿವೆ. ಒಬ್ಬಬ್ಬರ ಅಸಲಿಯತ್ತು ಹೊರ ಬರುತ್ತಿವೆ. ಹಾಗಾದರೆ ಯಾರ್ಯಾರಿದ್ದಾರೆ ಚಾಟ್‌ನಲ್ಲಿ? ಯಾರಿಗೆಲ್ಲಾ ತನಿಖೆಯ ಉರುಳು ಸುತ್ತಿಕೊಳ್ಳಬಹುದು ಇಲ್ಲಿದೆ ಒಂದು ರಿಪೋರ್ಟ್..!