ನೀವಂದುಕೊಂಡ ಹಾಗೇನೂ ಇಲ್ಲ, ಮತ್ತೆ ಕರೆದರೆ ವಿಚಾರಣೆಗೆ ಹಾಜರಾಗ್ತೀನಿ: ದಿಗಂತ್
ನಟ ದಿಗಂತ್‌ಗೆ ಸಿಸಿಬಿ ಇಂದು ಎರಡನೇ ನೊಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಬಾರಿ ದಿಗಂತ್- ಐಂದ್ರಿತಾ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಇಂದು ದಿಗಂತ್ ಒಬ್ಬರನ್ನೇ ಕರೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಬೆಂಗಳೂರು (ಸೆ. 23): ನಟ ದಿಗಂತ್‌ಗೆ ಸಿಸಿಬಿ ಇಂದು ಎರಡನೇ ನೊಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಬಾರಿ ದಿಗಂತ್- ಐಂದ್ರಿತಾ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು. ಇಂದು ದಿಗಂತ್ ಒಬ್ಬರನ್ನೇ ಕರೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಾ, ' ವಿಚಾರಣೆ ನಡೆಯುತ್ತಿದೆ. ಸಿಸಿಬಿಯವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ಕರೆದರೆ ಹಾಜರಾಗ್ತೀನಿ' ಎಂದು ದಿಗಂತ್ ಹೇಳಿದ್ದಾರೆ.