ಪ್ರವೀಣ್ ಹತ್ಯೆ ಕೇಸ್: ಆರೋಪಿಗಳ ಅರೆಸ್ಟ್ ಆದ ಮೇಲೆ ಬೆಳ್ಳಾರೆಯಲ್ಲಿ ಏನೇನಾಯ್ತು..?

ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆ ಹಿಂದೆ ಕೇರಳ ನಂಟು ಹೊಂದಿರುವ ಸಾಧ್ಯತೆ ಬಗ್ಗೆ ಪೊಲೀಸ್‌ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಸವಣೂರಿನ ಜಾಕೀರ್‌ ಹಾಗೂ ಬೆಳ್ಳಾರೆಯ ಮೊಹಮ್ಮದ್‌ ಶಫೀಕ್‌ ಎನ್ನುವವರನ್ನು ಬಂಧಿಸಲಾಗಿದೆ.

First Published Jul 29, 2022, 5:24 PM IST | Last Updated Jul 29, 2022, 6:15 PM IST

ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಘಟನೆ ಹಿಂದೆ ಕೇರಳ ನಂಟು ಹೊಂದಿರುವ ಸಾಧ್ಯತೆ ಬಗ್ಗೆ ಪೊಲೀಸ್‌ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಸವಣೂರಿನ ಜಾಕೀರ್‌ ಹಾಗೂ ಬೆಳ್ಳಾರೆಯ ಮೊಹಮ್ಮದ್‌ ಶಫೀಕ್‌ ಎನ್ನುವವರನ್ನು ಬಂಧಿಸಲಾಗಿದೆ. ಇಬ್ಬರೂ ಪಿಎಫ್‌ಐ ಕಾರ್ಯಕರ್ತರು ಎಂದು ತಿಳಿದುಬಂದಿದೆ. ಇವರನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇವರಲ್ಲಿ ಆರೋಪಿ ಶಫೀಕ್‌ ಪ್ರವೀಣ್‌ಗೆ ಪರಿಚಿತನಾಗಿದ್ದ. ಶಫೀಕ್‌ ತಂದೆ ಪ್ರವೀಣ್‌ ಕೋಳಿ ಫಾಮ್‌ರ್‍ನಲ್ಲೇ ಕೆಲಸ ಮಾಡುತ್ತಿದ್ದು, ಮೂರು ತಿಂಗಳ ಹಿಂದಷ್ಟೇ ಬೇರೆ ಕಡೆ ಕೆಲಸಕ್ಕೆ ಸೇರಿದ್ದರು.

ಕೇಸರಿ ಪಾಳಯವನ್ನೇ ನಡುಗಿಸಿದ ಪ್ರವೀಣ್ ಹತ್ಯೆ, ಅದೆಷ್ಟು ಚುರುಕಾಗಿದೆ ಪೊಲೀಸ್ ತನಿಖೆ.?

ಪ್ರವೀಣ್‌ ಹತ್ಯೆ ದಿನ ಬೆಳಗ್ಗೆಯಷ್ಟೇ ಪ್ರವೀಣ್‌ನನ್ನು ನೋಡಿದ್ದೆ ಅಂತ ಪತಿ ಹೇಳಿದ್ರು, ಮಧ್ಯರಾತ್ರಿ ಬಂದು ವಿಚಾರಣೆಗೆ ಕರೆ ತಂದು ಅರೆಸ್ಟ್‌ ಮಾಡಿದ್ದಾರೆ. ರಾತ್ರಿ 12.30ಕ್ಕೆ ಪೊಲೀಸರು ಬಂದು ಎನ್‌ಕ್ವಯರಿ ಇದೆ ಅಂತ ಹೇಳಿ ಕರೆದುಕೊಂಡು ಹೋದರು. ಈಗ ಅವರೇ ಕೊಲೆ ಆರೋಪಿ ಎಂದು ಹಣೆಪಟ್ಟಿಕಟ್ಟಲಾಗುತ್ತಿದೆ ಎಂದು ಶಫೀಕ್‌ ಬೆಳ್ಳಾರೆ ಕುಟುಂಬಸ್ಥರು ಆರೋಪಿಸಿದ್ದಾರೆ.